ಬೆಂಗಳೂರು : ಸಿದ್ದರಾಮಯ್ಯರನ್ನ ಕಚ್ಚೆ ಹರುಕ ಅಂತ ಮೈಸೂರು ಭಾಗದಲ್ಲಿ ಸಿದ್ದರಾಮಯ್ಯರನ್ನ ನಾನು ಕರೆಯಬಹುದು ಎಂದು ಹೇಳಿಕೆ ನೀಡಿದ್ದ, `ಸಿಟಿ ರವಿ ಕೂಡಲೇ ಕ್ಷಮೆಯಾಚಿಸಬೇಕು, ಕ್ಷಮೆ ಕೇಳದಿದ್ರೆ ಹರಕು ಕಚ್ಚೆ ಕಳುಹಿಸುತ್ತೇವೆ’ ಎಂದು ಈಗಾಗಲೇ ವಿನೂತನವಾದ ಅಭಿಮಾನ ನಡೆಸೋದಕ್ಕೆ ಕಾಂಗ್ರೆಸ್ ಕಿಸಾನ್ ಘಟಕ ಮುಂದಾಗುವುದಾಗಿ ಆಗ್ರಹಿಸಿದೆ.
ಚಿಕ್ಕಮಗಳೂರಿನ ತಾಲೂಕಿನ ಮುಳ್ಳಯ್ಯನಗಿರಿ ಸಮೀಪದ ಕವಿಕಲ್ಗಂಡಿ ಬಳಿ ಸಿದ್ದರಾಮಯ್ಯ ಅವರು ತಮ್ಮ ವಿರುದ್ದ ಹೇಳಿದ್ದ ಲೂಟಿ ರವಿ ಅಂತ ಕರೆಯುತ್ತಾರೆ ಅಂಥ ಹೇಳಿದ್ದ ಹೇಳಿಕೆಗೆ ತಿರುಗೇಟು ನೀಡಿದರು. ಇದೇ ವೇಳೆ ಅವರು ಸಿದ್ದರಾಮಯ್ಯನರನ್ನ ಕಚ್ಚೆ ಹರಕ ಅನ್ನುತ್ತಾ ಈ ಮಾತು ನನ್ನದ್ದಲ್ಲ, ಮೈಸೂರಿನ ಜನರದ್ದು. ಮೈಸೂರಿನ ಜನ ಹೀಗೆ ಮಾತನಾಡುತ್ತಾರೆ ಎಂದು ನಾನು ಆ ರೀತಿ ಹೇಳಬಹುದಲ್ವಾ? ಅಂಥ ಹೇಳಿದರು.
ಈ ವಿಚಾರವಾಗಿ ಕೋಪಗೊಂಡ ಕಾಂಗ್ರೆಸ್ ಕಿಸಾನ್ ಘಟಕ ಸಚಿವ ಸಿ.ಟಿ ರವಿ ಹೇಳಿಕೆ ವಿರುದ್ಧ ತಿರುಗಿಬಿದ್ದಿದ್ದಾರೆ. ಚಿಕ್ಕಮಗಳೂರಿನಲ್ಲಿ ಸಿದ್ದರಾಮಯ್ಯ ಸ್ಪರ್ಧಿಸುತ್ತಾರೆಂಬ ಭಯ ಆ ಭಯದಿಂದ ಸಿ.ಟಿ ರವಿ ಅಸಂಬಂದ್ಧ ಹೇಳಿಕೆ ನೀಡುತ್ತಿದ್ದಾರೆ. ಬಿಜೆಪಿ ನಾಯಕ ಸಿ.ಟಿ ರವಿ ಕ್ಷಮೆ ಕೇಳದಿದ್ರೆ ಹರಕು ಕಚ್ಚೆ ಕಳುಹಿಸುತ್ತೇವೆಂದು ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮಿಗ ಎಚ್ಚರಿಕೆ ನೀಡಿದ್ದಾರೆ