ಬೆಂಗಳೂರು : ವಯೋಸಹಜ ಕಾಯಿಲೆಯಿಂದ ಕನ್ನಡದ ಮಹಾನ್ ವಿಜ್ಞಾನ ಬರಹಗಾರ, ಪ್ರಾಧ್ಯಾಪಕ, ಸಮಾಜಸೇವಕ ಡಾ.ರಾಮಕೃಷ್ಣರಾವ್(87) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
SHOCKING NEWS: ಯುಪಿಯಲ್ಲಿ ಮೊಬೈಲ್ ಫೋನ್ ಬ್ಯಾಟರಿ ಸ್ಫೋಟ, 8 ತಿಂಗಳ ಮಗು ಸಾವು
ಬೆಂಗಳೂರಿನ ಕ್ರೈಸ್ಟ್ ಕಾಲೇಜಿನ ಭೌತಶಾಸ್ತ್ರ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗಗಳ ಮುಖ್ಯಸ್ಥರಾಗಿ ಸೇವೆಸಲ್ಲಿಸಿ ನಿವೃತ್ತರಾಗಿದ್ದಾರೆ. ನಿವೃತ್ತಿಯ ನಂತರ ಸಂದರ್ಶಕ ಪ್ರಾಧ್ಯಾಪಕರಾಗಿ ಬೆಂಗಳೂರು ನಗರದ ಯುವ ವಿದ್ಯಾರ್ಥಿಗಳಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸಲು ಬೆಂಗಳೂರು ಆಕಾಶವಾಣಿಯನ್ನು ಬಳಸಿಕೊಂಡು ವಿಜ್ಞಾನ ಪ್ರಸಾರದಲ್ಲಿ ಖಗೋಳಶಾಸ್ತ್ರ,ನಕ್ಷತ್ರಗಳು, ಗ್ರಹಗಳಿಗೆ ಸಂಬಂಧಿಸಿದ ನಕ್ಷತ್ರ ವೀಕ್ಷಣೆ, ಮುಂತಾದ ಕಾರ್ಯಕ್ರಮಗಳನ್ನು ಸತತವಾಗಿ ನಡೆಸಿಕೊಟ್ಟ ಪ್ರಮುಖರಲ್ಲೊಬ್ಬರು.
BREAKING NEWS: ಸಬ್ ಇನ್ಸ್ಪೆಕ್ಟರ್ ನೇಮಕಾತಿ ಹಗರಣ, ಬೆಂಗಳೂರು ಸೇರಿ 33 ದೇಶದ ಕಡೆ ಸಿಬಿಐ ದಾಳಿ
ಬೆಂಗಳೂರು ದೂರದರ್ಶನ’ದಲ್ಲಿ ಹಿರಿಯ ವಿಜ್ಞಾನಿಗಳಾದ, ಡಾ.ರಾಜಾರಾಮಣ್ಣ, ಡಾ. ಸಿ. ಎನ್. ಆರ್. ರಾವ್ ಡಾ.ಯು. ಆರ್. ರಾವ್, ಡಾ.ಎಮ್.ಆರ್ ಶ್ರೀನಿವಾಸನ್ ಮುಂತಾದವರ ಜೊತೆ ಸಂವಾದವನ್ನು ಮಾಡಿ, ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಶ್ವಕೋಶಕ್ಕೆ ಅನೇಕ ಉಪಯುಕ್ತ ಲೇಖನಗಳನ್ನು ಬರೆಯುವ ಜೊತೆಗೆ,’ವಿಜ್ಞಾನ ಲೇಖನಗಳ ಪರಿಶೋಧಕ’ರಾಗಿಯೂ ಸೇವೆಸಲ್ಲಿಸಿದ್ದಾರೆ. “ಕ್ರೈಸ್ಟ್ ಕಾಲೇಜ್ ಕನ್ನಡ ಸಂಘ”ವನ್ನು ಹುಟ್ಟು ಹಾಕುವಲ್ಲಿ ಪ್ರಮುಖಪಾತ್ರ ವಹಿಸಿದ್ದರು.
ಕಾಲೇಜ್ ನೌಕರಿಯಿಂದ ನಿವೃತ್ತರಾದ ಮೇಲೂ, ವೈಜ್ಞಾನಿಕ ಪ್ರವೃತ್ತಿಯನ್ನು ಪೋಷಿಸಿಕೊಂಡೇ ಬಂದರು. ಬೆಂಗಳೂರಿನಿಂದ ಪ್ರಸಾರವಾದ AIR ನ ವಿಜ್ಞಾನ ಕಾರ್ಯಕ್ರಮದಲ್ಲಿ, ೧೫೦ ಕ್ಕೂ ಹೆಚ್ಚು ವೈಜ್ಞಾನಿಕ-ಉಪನ್ಯಾಸಗಳನ್ನು ಕೊಟ್ಟಿದ್ದಾರೆ ಅವುಗಳೆಲ್ಲಾ ಮುಖ್ಯವಾಗಿ ಖಗೋಳಶಾಸ್ತ್ರ, ಮತ್ತು ನಕ್ಷತ್ರಗಳು, ಗ್ರಹಗಳಿಗೆ ಸಂಬಂಧಿಸಿದ್ದು. ‘ಟಿ.ವಿ ಮತ್ತು ದೂರದರ್ಶನ’ದಲ್ಲಿ ಹಿರಿಯ ವಿಜ್ಞಾನಿಗಳಾದ, ಡಾ. ರಾಜಾರಾಮಣ್ಣ, ಡಾ. ಸಿ.ಎನ್.ಆರ್ ರಾವ್,ಡಾ.ಯು.ಆರ್.ರಾವ್, ಡಾ.ಎಮ್.ಆರ್.ಶ್ರೀ ನಿವಾಸನ್, ಮುಂತಾದವರ ಜೊತೆ ಸಂವಾದವನ್ನು ಮಾಡಿ, ಕಾರ್ಯಕ್ರಮಗಳನ್ನು ಕೊಟ್ಟರು. ‘ರಾಮನ್ ಶತಮಾನೋತ್ಸವ’ದ ವಿಶೇಷ ಸಮಾರಂಭದಲ್ಲಿ ‘ದೆಹಲಿ ದೂರದರ್ಶನ’ಕ್ಕೆ ಮಾಡಿದ “Raman,The natural Philosopher “ಎಂಬ ‘ಸಾಕ್ಷಿ ಚಿತ್ರ’ ಎಲ್ಲರ ವಿಶೇಷ ಮನ್ನಣೆಗೆ ಪಾತ್ರವಾಯಿತು. ನಿವೃತ್ತಿಯ ಬಳಿಕವೂ ಅನೇಕ ಕಾಲೇಜುಗಳಲ್ಲಿ ವಿಶ್ವವಿದ್ಯಾಲಯಗಳಲ್ಲಿ ‘ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಶ್ವಕೋಶಕ್ಕೆ ಅನೇಕ ಉಪಯುಕ್ತ ಲೇಖನಗಳನ್ನು ಬರೆಯುವ ಜೊತೆಗೆ,’ವಿಜ್ಞಾನ ಲೇಖನಗಳ ಪರಿಶೋಧಕ’ರಾಗಿಯೂ ಸೇವೆಸಲ್ಲಿಸಿದ್ದಾರೆ.