ಬೆಂಗಳೂರು : ರೈತರಿಂದಲೇ ತಮ್ಮ ಜಮೀನುಗಳಲ್ಲಿ 2022ರ ಮುಂಗಾರು ಬೆಳೆ ಸಮೀಕ್ಷೆಯನ್ನು ಕೈಗೊಳ್ಳಲು ಕೃಷಿ ಇಲಾಖೆಯು ಮೊಬೈಲ್ ಆ್ಯಪ್ ಅವಕಾಶ ಕಲ್ಪಿಸಿದ್ದು ಜಿಲ್ಲೆಯ ರೈತರು ತಮ್ಮ ಜಮೀನಿನ ಬೆಳೆ ವಿವರಗಳನ್ನು ಆಪ್ಲೋಡ್ ಮಾಡಬೇಕೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಜಿ.ಎಸ್.ಜಯಸ್ವಾಮಿ ಅವರು ತಿಳಿಸಿದ್ದಾರೆ.
BIGG NEWS : ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆ ಸಿ.ಟಿ. ರವಿ ಬಳಸಿದ ಪದ ಸರಿಯಲ್ಲ : ಜೆಡಿಎಸ್ ಶಾಸಕ ಶಿವಲಿಂಗೇಗೌಡ
ಮೊಬೈಲ್ ಅಪ್ನಲ್ಲಿ ಬೆಳೆ ಸಮೀಕ್ಷೆ ಕೈಗೊಳ್ಳುವ ವಿಧಾನ: ಗೂಗಲ್ ಪ್ಲೇ-ಸ್ಟೋರ್ ನಿಂದ Kharif Farmer Crop – 2022-23 ಡೌನ್ಲೋಡ್ ಮಾಡಿಕೊಂಡು, ಆಧಾರ್ ಮೂಲಕ e-KYC ಮಾಡಿ(OTP ನಮೂದಿಸಿ ಆಪ್ ಸಕ್ರಿಯಗೊಳಿಸಿ). ಮೊಬೈಲ್ ಸಂಖ್ಯೆ ನಮೂದಿಸಿ ಆಪ್ ಸಕ್ರಿಯಗೊಳಿಸಿ.
BREAKING NEWS: ರಾಜಕಾಲುವೆ ಒತ್ತುವರಿ ಸ್ಥಳದಲ್ಲಿ ಮಾರ್ಕಿಂಗ್ ಮಾಡ್ತಿರೋ BBMP ಅಧಿಕಾರಿಗಳು
FRUITS ನಲ್ಲಿರುವಂತೆ ರೈತರ ವಿವರ ಮತ್ತು ಜಮೀನಿನ ವಿವರ ಸ್ವಯಂ ಡೌನ್ಲೋಡ್ ಆಗುವುದು. ಬೆಳೆ ಸಮೀಕ್ಷೆ ಮಾಡಲು ಸರ್ವೇ ನಂ. ಆಯ್ಕೆ ಮಾಡಿ.
ಬೆಳೆ ಹೆಸರು ಮತ್ತು ವಿವರ ನಮೂದಿಸಿ, ಛಾಯಾಚಿತ್ರ ತೆಗೆದು ಮಾಹಿತಿ ಸೇರಿಸಿ ತಮ್ಮ ಜಮೀನಿನಲ್ಲಿ ಬೆಳೆದಿರುವ ಎಲ್ಲಾ ಬೆಳೆಗಳ ವಿವರಗಳನ್ನು ಆಯಾ ಬೆಳೆಗಳ ವಿಸ್ತೀರ್ಣಕ್ಕೆ ಅನುಗುಣವಾಗಿ ಮಾಹಿತಿಯನ್ನು ಸೇರಿಸಿ ಒಂದಾದನಂತರ ಒಂದರಂತೆ ಎಲ್ಲ ಸರ್ವೇ ನಂ. ಮಾಹಿತಿಯನ್ನು ಸೇರಿಸಬಹುದು.
ಸರ್ವೇ ನಂ. ಬಿಟ್ಟುಹೋಗಿದ್ದಲ್ಲಿ ಆಪ್ ಮೂಲಕವೇ ಸೇರಿಸಬಹುದಾಗಿದೆ. ಬೆಳೆ ಸಮೀಕ್ಷೆ ವರದಿಯಲ್ಲಿ ಬೆಳೆ ವಿವರ ಅಪ್ಲೋಡ್ ಆಗಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಿ.
ಆಧಾರ್ ಮೂಲಕ e-KYC ಮಾಡಲು ಸಾಧ್ಯವಾಗದಿದ್ದಲ್ಲಿ, ತಮ್ಮ ಸಮೀಪದ ಸಾಮಾನ್ಯ ಸೇವಾ ಕೇಂದ್ರ, ಬ್ಯಾಂಕ್, ಅಂಚೆ ಕಚೇರಿ, ಆಟಲ್ ಜನಸ್ನೇಹಿ ಕೇಂದ್ರಕ್ಕೆ ತೆರಳಿ ಆಧಾರ್ಗೆ ತಮ್ಮ ಮೊಬೈಲ್ ಸಂಖ್ಯೆಯನ್ನು ಅಪೇಟ್ ಮಾಡಿಸಿ, FRUITS ವಿವರ ಡೌನ್ಲೋಡ್ ಆಗದಿದ್ದಲ್ಲಿ ಆಧಾರ್, ಪಹಣಿ, ಬ್ಯಾಂಕ್ ಖಾತೆ ಮಾಹಿತಿಯೊಂದಿಗೆ ಸಮೀಪದ ರೈತ ಸಂಪರ್ಕ ಕೇಂದ್ರ/ ತೋಟಗಾರಿಕೆ ಇಲಾಖೆ/ ಕಂದಾಯ ಇಲಾಖೆಯನ್ನು ಸಂಪರ್ಕಿಸಿ ನೊಂದಾಯಿಸಿಕೊಳ್ಳಿ.
ಸರ್ವೇ ನಂ, ಸೇರಿಸಲು ಸಮಸ್ಯೆ ಇದ್ದಲ್ಲಿ ಸಮೀಪದ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಬೆಳೆ ಸಮೀಕ್ಷೆ ಸಹಾಯವಾಣಿ ಸಂಖ್ಯೆ : 844 844 7715 ಅನ್ನು ಸಂಪರ್ಕಿಸಿ ಅಥವಾ ಕೃಷಿ / ಕಂದಾಯ/ ತೋಟಗಾರಿಕೆ/ ರೇಷ್ಮೆ ಇಲಾಖೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರಾದ ಜಿ.ಎಸ್.ಜಯಸ್ವಾಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.