ಬೆಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯರನ್ನು ಕಚ್ಚೆ ಹರುಕ ಎಂಬ ಸಿ.ಟಿ. ರವಿ ಹೇಳಿಕೆಗೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಪ್ರತಿಕ್ರಿಯೆ ನೀಡಿದ್ದು, ಸಿ.ಟಿ ರವಿ ಬಳಸಿದ ಪದ ಸರಿಯಲ್ಲ ಎಂದು ಹೇಳಿದ್ದಾರೆ.
BREAKING NEWS: ರಾಜಕಾಲುವೆ ಒತ್ತುವರಿ ಸ್ಥಳದಲ್ಲಿ ಮಾರ್ಕಿಂಗ್ ಮಾಡ್ತಿರೋ BBMP ಅಧಿಕಾರಿಗಳು
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಶಿವಲಿಂಗೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಸಿ.ಟಿ ರವಿ ಬಳಸಿರುವ ಪದ ಸರಿಯಿಲ್ಲ. ಸಿದ್ದರಾಮಯ್ಯ ವಯಸ್ಸಿಗೂ, ಸಿ.ಟಿ. ರವಿ ವಯಸ್ಸಿಗೂ ಅಂತರವಿದೆ. ಮಾಜಿ ಮುಖ್ಯಮಂತ್ರಿ ಬಗ್ಗೆ ವೈಯಕ್ತಿಕ ವಿಚಾರವನ್ನು ಮಾತನಾಡುವುದು ಸರಿಯಲ್ಲ. ಬಾಯಿ ತಪ್ಪಿ ಬಂದಿದೆ ಅಂತ ಹೇಳಲಿ ಎಂದರು.
ಸಿಟಿ ರವಿ ಹೇಳಿದ್ದೇನು?
ಸಿದ್ದರಾಮಯ್ಯರನ್ನ ಕಚ್ಚೆ ಹರುಕ ಅಂತ ಮೈಸೂರು ಭಾಗದಲ್ಲಿ ಸಿದ್ದರಾಮಯ್ಯರನ್ನ ನಾನು ಕರೆಯಬಹುದು ಅಲ್ವಾ ಅಂತ ಕಚ್ಚೆ ಹರುಕ ಅಂತ ಸಿಟಿ ರವಿ ಅವರು ಹೇಳಿದ್ದಾರೆ. ಚಿಕ್ಕಮಗಳೂರಿನ ತಾಲೂಕಿನ ಮುಳ್ಳಯ್ಯನಗಿರಿ ಸಮೀಪದ ಕವಿಕಲ್ಗಂಡಿ ಬಳಿ ಸಿದ್ದರಾಮಯ್ಯ ಅವರು ತಮ್ಮ ವಿರುದ್ದ ಹೇಳಿದ್ದ ಲೂಟಿ ರವಿ ಅಂತ ಕರೆಯುತ್ತಾರೆ ಅಂಥ ಹೇಳಿದ್ದ ಹೇಳಿಕೆಗೆ ತಿರುಗೇಟು ನೀಡಿದರು. ಇದೇ ವೇಳೆ ಅವರು ಸಿದ್ದರಾಮಯ್ಯನರನ್ನ ಕಚ್ಚೆ ಹರಕ ಅನ್ನುತ್ತಾ ಈ ಮಾತು ನನ್ನದ್ದಲ್ಲ, ಮೈಸೂರಿನ ಜನರದ್ದು. ಮೈಸೂರಿನ ಜನ ಹೀಗೆ ಮಾತನಾಡುತ್ತಾರೆ ಎಂದು ನಾನು ಆ ರೀತಿ ಹೇಳಬಹುದಲ್ವಾ? ಅಂಥ ಹೇಳಿದರು. ಇನ್ನೂ ಸಿದ್ದರಾಮಯ್ಯ ಶಾಸಕರಾಗಿದ್ದಾಗ, ಆಗದೇ ಇದ್ದಾಗ ಹೇಗಿದ್ರು ಅಂತ ಬಿಚ್ಚಿಡಲು ನನಗೂ ಬರುತ್ತೆ ಅಂಥ ಹೇಳಿದರು.