ಬೆಂಗಳೂರು: ನಗರದಲ್ಲಿ ಕಳೆದೆರೆಡು ದಿನಗಳಿಂದ ಮಳೆರಾಯ ಸ್ವಲ್ಪ ಬಿಡುವು ಕೊಟ್ಟಿದ್ದಾನೆ. ಕಳೆದ ವಾರದಲ್ಲಿ ಸುರಿದ ಮಳೆಗೆ ಇಡೀ ಬೆಂಗಳೂರೇ ನಲುಗಿ ಹೋಗಿತ್ತು. ಇದೀಗ ಮಳೆ ಕಡಿಮಾಯಾಗುತ್ತಿದ್ದಂತೆ ಬಿಬಿಎಂಪಿ ಅಧಿಕಾರಿಗಳು ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ.
BIGG NEWS: ಚಿಂಚೋಳಿ ತಾಲೂಕಿನಲ್ಲಿ ಧಾರಾಕಾರ ಮಳೆ; ಮುಲ್ಲಾಮಾರಿ ಜಲಾಶಯ ಭರ್ತಿ; ಸಂಪರ್ಕ ಕಡಿತ
ನಗರದ ಮಹದೇವಪುರ ವಲಯದಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ರಾಜಕಾಲುವೆ ನುಂಗಿ ಬಂಗಲೆ ಕಟ್ಟಿಕೊಂಡಿದ್ದರು. ಇದೀಗ ಮಳೆ ಕಡಿಮಾಯಾಗುತ್ತಿದಂತೆ ಬಿಬಿಎಂಪಿ ಶಾಕ್ ನೀಡಿದೆ. ವಿಲ್ಲಾ ನಿವಾಸಿಗಳಿಗೆ ಬಿಬಿಎಂಪಿ ಅಧಿಕಾರಿಗಳು ಬಿಗ್ ಶಾಕ್ ಕೊಟ್ಟಿದ್ದಾರೆ. ಈಗಾಗಲೇ ಕೆಲವು ಕಡೆ ಒತ್ತುವರಿ ಕೆಲವು ಕಡೆ ಕಾರ್ಯಾಚರಣೆಯನ್ನು ಬಿಬಿಎಂಪಿ ಅಧಿಕಾರಿಗಳು ಮಾಡಿದ್ದಾರೆ.
ಇತ್ತ, ವಿಲ್ಲಾ ನಿವಾಸಿಗಳಿಗೆ ಮಳೆಯ ಕಾಟ ದಿಂದ ನಿವಾಸಿಗಳು ಮನೆಖಾಲಿ ಮಾಡದ್ದಾರೆ. ಇದೀಗ ಅಲ್ಲಿ ಖದೀಮರ ಕೈಚಳಕ ತೋರಿಸಿದ್ದಾರೆ. ಮನೆಯಲಿದ್ದ ಚಿನ್ನಾಭರಣಗಳನ್ನ ದೋಚಿ ಕಳ್ಳರು ಪರಾರಿಯಾಗುತ್ತಿದ್ದಾರೆ. ಇದರಿಂದ ವಿಲ್ಲಾ ನಿವಾಸಿಗಳಿಗೆ ಆತಂಕ ಶುರುವಾಗಿದೆ.