ನವದೆಹಲಿ: ಎರಡು ದಿನಗಳ ಲಡಾಖ್ ಪ್ರವಾಸದಲ್ಲಿರುವ ಭೂ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ (Army chief General Manoj Pande) ಅವರು ಭಾನುವಾರ ಲಡಾಖ್ ಸೆಕ್ಟರ್ಗೆ ಭೇಟಿ ನೀಡಿದ್ದರು. ಈ ವೇಳೆ ಭಾರತೀಯ ವಾಯುಪಡೆಯ (ಐಎಎಫ್) ಅಪಾಚೆ ದಾಳಿ ಹೆಲಿಕಾಪ್ಟರ್ನಲ್ಲಿ ಹಾರಾಟ ನಡೆಸಿದ್ದು, ಅದರ ಸಾಮರ್ಥ್ಯದ ಬಗ್ಗೆ ಪರಿಶೀಲಿಸಿದ್ದಾರೆ ಎಂದು ಐಎಎಫ್ ತಿಳಿಸಿದೆ.
ಈ ಪ್ರದೇಶದ ಗೋಗ್ರಾ-ಹಾಟ್ಸ್ಪ್ರಿಂಗ್ಸ್ ಪ್ರದೇಶದಲ್ಲಿ ಭಾರತೀಯ ಮತ್ತು ಚೀನಾದ ಮಿಲಿಟರಿಗಳು ಗಸ್ತು ತಿರುಗಲು ಪ್ರಾರಂಭಿಸಿದ ಎರಡು ದಿನಗಳ ನಂತರ ಶನಿವಾರ ಪೂರ್ವ ಲಡಾಖ್ನಲ್ಲಿನ ಒಟ್ಟಾರೆ ಭದ್ರತಾ ಪರಿಸ್ಥಿತಿಯ ಸಮಗ್ರ ಪರಿಶೀಲನೆಯನ್ನು ಜನರಲ್ ಪಾಂಡೆ ನಡೆಸಿದರು.
#WATCH | Indian Army chief General Manoj Pande flying in an Indian Air Force Apache attack helicopter in the Ladakh sector.
(Video source: IAF officials) pic.twitter.com/TAOuQpGQ6P
— ANI (@ANI) September 11, 2022
ಲೇಹ್ ಮೂಲದ ಫೈರ್ ಅಂಡ್ ಫ್ಯೂರಿ ಕಾರ್ಪ್ಸ್ ನ ಪ್ರಧಾನ ಕಚೇರಿಗೆ ಅವರು ಭೇಟಿ ನೀಡಿದ ಬಗ್ಗೆ ಸೇನೆ ಭಾನುವಾರ ಟ್ವೀಟ್ ಮಾಡಿದೆ.
ಫೈರ್ ಅಂಡ್ ಫ್ಯೂರಿ ಕಾರ್ಪ್ಸ್ ಕಮಾಂಡರ್, ಲೆಫ್ಟಿನೆಂಟ್ ಜನರಲ್ ಅನಿಂಧ್ಯಾ ಸೇನ್ಗುಪ್ತಾ ಮತ್ತು ಇತರ ಹಿರಿಯ ಅಧಿಕಾರಿಗಳು ಪೆಟ್ರೋಲಿಂಗ್ ಪಾಯಿಂಟ್ 15 ರಲ್ಲಿ ನಡೆಯುತ್ತಿರುವ ವಿಘಟನೆ ಪ್ರಕ್ರಿಯೆ ಸೇರಿದಂತೆ ಒಟ್ಟಾರೆ ಭದ್ರತಾ ಪರಿಸ್ಥಿತಿಯ ಬಗ್ಗೆ ಜನರಲ್ ಪಾಂಡೆ ಅವರಿಗೆ ತಿಳಿಸಿದ್ದಾರೆ.
BREAKING NEWS: ಛತ್ತೀಸ್ಗಢದಲ್ಲಿ ನಿಂತಿದ್ದ ಟ್ರಕ್ಗೆ ಬಸ್ ಡಿಕ್ಕಿ: ಏಳು ಮಂದಿ ಸ್ಥಳದಲ್ಲೇ ಸಾವು, ಮೂವರಿಗೆ ಗಾಯ