ನವದೆಹಲಿ: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಪ್ರಸ್ತುತ ಪಂಜಾಬ್, ಹರಿಯಾಣ ಮತ್ತು ದೆಹಲಿ ಎನ್ಸಿಆರ್ನ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸುತ್ತಿದೆ. ಈ ದಾಳಿಗಳು ಪ್ರಾಥಮಿಕವಾಗಿ ದರೋಡೆಕೋರರು ಮತ್ತು ಅವರ ಭಯೋತ್ಪಾದಕ ಸಂಪರ್ಕಗಳೊಂದಿಗೆ ಸಂಬಂಧ ಹೊಂದಿವೆ ಎನ್ನಲಾಗಿದೆ ಸಿಧು ಮೂಸ್ ವಾಲಾ ಕೊಲೆ ಪ್ರಕರಣ ಮತ್ತು ಸಲ್ಮಾನ್ ಖಾನ್ ಬೆದರಿಕೆ ಪ್ರಕರಣದಲ್ಲಿ ಭಾಗಿಯಾಗಿರುವ ಗ್ಯಾಂಗ್ ಸ್ಟರ್ ಗಳ ಮೇಲೆ ಈ ದಾಳಿ ಕೇಂದ್ರಿಕರಿಸಿದೆ ಎನ್ನಲಾಗಿದೆ. ವರದಿಗಳ ಪ್ರಕಾರ ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ಎನ್ಐಎಯ ದಾಳಿಗೆ ಈಡಾಗಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ, ದೇಶಾದ್ಯಂತ ನಡೆಯುತ್ತಿರುವ ಗ್ಯಾಂಗ್ಗಳು ಮತ್ತು ಅಪರಾಧ ಸಿಂಡಿಕೇಟ್ಗಳನ್ನು ಭೇದಿಸಲು ಎನ್ಐಎ 60 ಸ್ಥಳಗಳಲ್ಲಿ ದಾಳಿ ನಡೆಸಿದೆ.