ಬೆಂಗಳೂರು: 2012ರ ಪೋಕ್ಸೊ ಕಾಯ್ದೆಯು ಪ್ರೀತಿಸುತ್ತಿರುವ ಹದಿಹರೆಯದವರನ್ನು ಶಿಕ್ಷಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ವಿಚಾರಣೆ ವೇಳೆ ಹೇಳಿದೆ. ತಮ್ಮ ಮಗನ ವಿರುದ್ದ ದಾಖಲಾಗಿದ್ದ ಪೋಕ್ಸೋ ಕಾಯಿದೆಯ ಅರ್ಜಿಗೆ ಸಂಬಂಧಪಟ್ಟಂತೆ ತಂದೆಯ ಅರ್ಜಿಯ ವಿಚಾರಣೆ ನಡೆಸುವಾಗ ಹೈಕೋರ್ಟ್ ಈ ಹೇಳಿಕೆಯನ್ನು ನೀಡಿದೆ.
“ಪೋಕ್ಸೊ ಕಾಯ್ದೆಯನ್ನು ಏಕೆ ತರಲಾಯಿತು ಎಂಬುದನ್ನು ನಾವು ಮರೆಯಬಾರದು, ಆದರೆ ಪ್ರೀತಿಯಲ್ಲಿ ಬೀಳುವ ಹದಿಹರೆಯದವರನ್ನು ಶಿಕ್ಷಿಸಲು ಮತ್ತು ಕಾಯ್ದೆಯಲ್ಲಿ ಶಿಕ್ಷೆಗೆ ಅರ್ಹವಾದಂತಹ ಕೆಲಸಗಳನ್ನು ಮಾಡಲು ನಾವು ಅದನ್ನು ಮಾಡಬೇಕು ಎಂದು ಇದರರ್ಥವಲ್ಲ” ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಹೇಳಿದರು. “ಲೈಂಗಿಕ ಚಟುವಟಿಕೆಗೆ ಸಂಬಂಧಿಸಿದ ಪ್ರತಿಯೊಂದು ಪ್ರಕರಣವು ಪೋಕ್ಸೊ ಕಾಯ್ದೆಯಡಿ ಬರುವುದಿಲ್ಲ. ಆದರೆ ಹದಿಹರೆಯದವರು ಕಾಯ್ದೆಯ ಪರಿಣಾಮಗಳನ್ನು ತಿಳಿಯದೆ ಅವುಗಳನ್ನು ಮಾಡುವಂತಹ ಕೆಲವು ಪ್ರಕರಣಗಳನ್ನು ನಾವು ನೋಡಿದ್ದೇವೆ ಅಂತ ನ್ಯಾಯಪೀಠ ತಿಳಿಸಿದೆ.