ಕೀವ್: ಉಕ್ರೇನಿಯನ್ ಪಡೆಗಳು ಭಾನುವಾರ ದೇಶದ ಪೂರ್ವದಲ್ಲಿ ತನ್ನ ಪ್ರತಿದಾಳಿಯನ್ನು ಹೆಚ್ಚಿಸಿದೆ. ಈ ನಡುವೆ ಈಶಾನ್ಯ ಖಾರ್ಕಿವ್ ಪ್ರದೇಶದಲ್ಲಿ ರಷ್ಯಾ ಆಕ್ರಮಿತ ಪ್ರದೇಶಗಳನ್ನು ಮರಳಿ ಪಡೆಯಲು ಉಕ್ರೇನ್ನ ಸೇನೆ ಮುಂದಾಗಿದೆ. ಉಭಯ ದೇಶಗಳ ಯುದ್ಧವು ಭಾನುವಾರ 200 ದಿನಗಳನ್ನು ಸಮೀಪಿಸುತ್ತಿದ್ದಂತೆ ಈಶಾನ್ಯ ಖಾರ್ಕಿವ್ನಲ್ಲಿ ಉಕ್ರೇನ್ನ ಪ್ರತಿದಾಳಿ ನಂತರ ಸೇನಾ ಪಡೆಗಳನ್ನು ರಷ್ಯಾ ವಾಪಸ್ಸು ಪಡೆದುಕೊಳ್ಳವುದಕ್ಕೆ ಮುಂದಾಗಿದೆ.
ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಶನಿವಾರ ತಡರಾತ್ರಿ ವಿಡಿಯೋ ಭಾಷಣದಲ್ಲಿ ರಷ್ಯನ್ನರನ್ನು ಅಣಕಿಸಿ, “ಇತ್ತೀಚಿನ ದಿನಗಳಲ್ಲಿ ರಷ್ಯಾದ ಸೈನ್ಯವು ತಾನು ಮಾಡಬಹುದಾದ ಅತ್ಯುತ್ತಮವಾದದ್ದನ್ನು ಪ್ರದರ್ಶಿಸುತ್ತಿದೆ – ತನ್ನ ಬೆನ್ನನ್ನು ತೋರಿಸುತ್ತಿದೆ” ಎಂದು ಹೇಳಿದರು. ಭಾನುವಾರ, ಉಕ್ರೇನ್ ಸೈನಿಕರು ರಷ್ಯಾದವರಿಂದ ವಶಪಡಿಸಿಕೊಂಡ ಮತ್ತೊಂದು ಪಟ್ಟಣವಾದ ಚ್ಕಾಲೊವ್ಸ್ಕೆ ಮೇಲೆ ರಾಷ್ಟ್ರಧ್ವಜವನ್ನು ಹಾರಿಸುವ ವೀಡಿಯೊವನ್ನು ಅವರು ಪೋಸ್ಟ್ ಮಾಡಿದ್ದಾರೆ.