ನವದೆಹಲಿ: ಆನ್ಲೈನ್ ವಂಚನೆಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಇತ್ತೀಚಿನ ದಿನಗಳಲ್ಲಿ, ವಂಚಕರು ನಿಮ್ಮನ್ನು ವಂಚಿಸಲು ನೂರಾರು ಮಾರ್ಗಗಳನ್ನು ಹುಡುಕುತ್ತಿರುತ್ತಾರೆ. ಅವುಗಳಲ್ಲಿ ವೀಡಿಯೊ ಕರೆ(video call) ಕೂಡ ಒಂದು.
ಜನರನ್ನು ವಂಚಿಸುವ ಮಾರ್ಗಗಳಲ್ಲಿ ವೀಡಿಯೊ ಕರೆಯೂ ಒಂದಾಗಿದೆ. ವಂಚಕರು ಸಂತ್ರಸ್ತರಿಗೆ ವೀಡಿಯೊ ಕರೆ ಮಾಡುತ್ತಾರೆ. ಸಂತ್ರಸ್ತನು ಫೋನ್ ಕರೆ ರಿಸೀವ್ ಮಾಡಿದಾಗ ವೀಡಿಯೊ ಕರೆಯಲ್ಲಿ ಅರೆಬೆತ್ತಲೆ ಹುಡುಗಿ ಕಾಣಿಸಿಕೊಳ್ಳುತ್ತಾಳೆ. ಸಂತ್ರಸ್ತ ಅದಕ್ಕೆ ಪ್ರತಿಕ್ರಿಯಿಸಿದರೆ, ಸ್ಕ್ಯಾಮರ್ಗಳು ವೀಡಿಯೊಗಳನ್ನು ರೆಕಾರ್ಡ್ ಮಾಡುತ್ತಾರೆ ಅಥವಾ ಸ್ಕ್ರೀನ್ಶಾಟ್ಗಳನ್ನು ತೆಗೆದುಕೊಳ್ಳುತ್ತಾರೆ. ನಂತ್ರ, ಅವುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾಕುತ್ತಾರೆ. ಫೋಟೋಗಳು ಅಥವಾ ವೀಡಿಯೊಗಳನ್ನು ಪೋಸ್ಟ್ ಮಾಡುವುದನ್ನು ತಡೆಯಲು ಸಂತ್ರಸ್ತನು ದೊಡ್ಡ ಮೊತ್ತವನ್ನು ಪಾವತಿಸಬೇಕೆಂದು ಅವರು ಒತ್ತಾಯಿಸುತ್ತಾರೆ.
ಈ ಹ್ಯಾಕ್ಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ನೀವು ಮಾಡಬಹುದಾದ ಪ್ರಮುಖ ವಿಷಯವೆಂದರೆ ಅಪರಿಚಿತ ಸಂಖ್ಯೆಗಳಿಂದ ವೀಡಿಯೊ ಕರೆಗಳನ್ನು ಎಂದಿಗೂ ಸ್ವೀಕರಿಸದಿರುವುದು. ಬಳಕೆದಾರರು ತಮ್ಮ ಗೌಪ್ಯತೆ ಸೆಟ್ಟಿಂಗ್ಗಳನ್ನು ಮಾರ್ಪಡಿಸುವ ಆಯ್ಕೆಯನ್ನು ಹೊಂದಿರುತ್ತಾರೆ ಮತ್ತು ಉನ್ನತ ಮಟ್ಟದ ಭದ್ರತೆಯನ್ನು ನಿರ್ವಹಿಸುತ್ತಾರೆ. ಯಾವುದೇ ಆನ್ಲೈನ್ ಪ್ಲಾಟ್ಫಾರ್ಮ್ನಲ್ಲಿ, ನಿಮ್ಮ ಫೋನ್ ಸಂಖ್ಯೆ, ಇತರ ಖಾತೆ ಐಡಿಗಳು ಮತ್ತು ನಿಮ್ಮ ಸಂಪರ್ಕಗಳ ಪಟ್ಟಿಯನ್ನು ಶೇರ್ ಮಾಡಿಕೊಳ್ಳಬೇಡಿ.
BIG NEWS: ಲಕ್ನೋ ಹೋಟೆಲ್ ಅಗ್ನಿ ದುರಂತ: 15 ಅಧಿಕಾರಿಗಳನ್ನು ಅಮಾನತುಗೊಳಿಸಿದ ಸಿಎಂ ಯೋಗಿ ಆದಿತ್ಯನಾಥ್
BIGG NEWS : ಅರಣ್ಯಪ್ರದೇಶಗಳ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ತಡೆಯಲು ಕ್ರಮ : ಸಿಎಂ ಬಸವರಾಜ ಬೊಮ್ಮಾಯಿ