ಹೊಸಪೇಟೆ : ಗಣೇಶ ಮುರ್ತಿ ವಿಸರ್ಜನೆ ವೇಳೆ ಘೋರ ದುರಂತವೊಂದು ಸಂಭವಿಸಿದ್ದು, ಗಣೇಶ ಮುರ್ತಿ ವಿಸರ್ಜನೆ ಮಾಡುವ ವೇಳೆ ಕ್ರೇನ್ ಕಾಲುವೆಗೆ ಪಲ್ಟಿಯಾಗಿ ಓರ್ವ ಸಾವನ್ನಪ್ಪಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೊಸಪೇಟೆಯಲ್ಲಿ ನಡೆದಿದೆ.
ವಿದ್ಯಾರ್ಥಿಗಳೇ ಗಮನಿಸಿ : `CET’ ದಾಖಲಾತಿ ಪರಿಶೀಲನೆಗೆ ಮತ್ತೊಂದು ಅವಕಾಶ ನೀಡಿದ ಕೆಇಎ
ಹೊಸಪೇಟೆಯ ಟಿಬಿ ಡ್ಯಾಂನ ಹೊರವಲಯದ ಕಾಲುವೆಯಲ್ಲಿ 34 ಅಡಿ ಎತ್ತರದ ಗಣೇಶ ಮೂರ್ತಿ ವಿಸರ್ಜನೆಗೆ ಕ್ರೇನ್ ಬಳಸಲಾಗುತ್ತಿತ್ತು. ಕ್ರೇನ್ ಕಾಲುವೆಗೆ ಉರುಳಿ ಬಿದ್ದ ಪರಿಣಾಮ ಅಶೋಕ ಸ್ಥಳದಲ್ಲೇ ಸಾವನ್ನಪ್ಪಿದರೆ, ಸಾಯಿ ನಿಖಿಲ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.