ಉತ್ತರ ಪ್ರದೇಶ: ಯುಪಿ ಸಿಎಂ ಯೋಗಿ ಆದಿತ್ಯನಾಥ್ ಶುಕ್ರವಾರ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಹಾಗೂ ಪ್ರಧಾನಿ ನರೇಂದ್ರ ಮೋದಿಯವರನ್ನು ಹೋಲಿಕೆ ಮಾಡಿದ್ದು, ಮೋದಿಯವರಿಗೆ ದೇಶದ ಬಗ್ಗೆ ಹೆಮ್ಮೆಯಿದೆ. ಆದ್ರೆ, ನೆಹರೂ ಅವರಿಗೆ ಇರಲಿಲ್ಲ ಎಂದಿದ್ದಾರೆ.
ಶುಕ್ರವಾರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಆದಿತ್ಯನಾಥ್ , “ತಮ್ಮ ಪರಂಪರೆಯ ಬಗ್ಗೆ ಹೆಮ್ಮೆಪಡದ ಒಬ್ಬ ಪ್ರಧಾನಿ ಇದ್ದರು. ಆದ್ರೆ, ಈಗ ಭಾರತವು ದೇಶದ ಪರಂಪರೆ ಬಗ್ಗೆ ಹೆಮ್ಮೆಪಡುವ ಪ್ರಧಾನಿ ಮೋದಿಯನ್ನು ಹೊಂದಿದೆ. ಅಷ್ಟೇ ಅಲ್ಲದೇ, ಇಡೀ ಭಾರತವನ್ನು ‘ಏಕ್ ಭಾರತ್ ಶ್ರೇಷ್ಠ ಭಾರತ’ ಮಾಡಲು ಸಂಕಲ್ಪ ಮಾಡಿದ ನರೇಂದ್ರ ಮೋದಿ ಇದ್ದಾರೆ” ಎಂದು ಅವರು ಹೇಳಿದರು.
ಸೋಮನಾಥ ದೇಗುಲದ ಜೀರ್ಣೋದ್ಧಾರಕ್ಕೆ ದೇಶದ ರಾಷ್ಟ್ರಪತಿಯನ್ನು ಕಳುಹಿಸುವುದನ್ನು ವಿರೋಧಿಸಿದ ಪ್ರಧಾನಿಯನ್ನೂ ನಾವು ನೋಡಿದ್ದೇವೆ ಮತ್ತು ಇಂದು ಅಯೋಧ್ಯೆಯಲ್ಲಿ ಭವ್ಯವಾದ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ ಪ್ರಧಾನಿಯನ್ನು ನಾವು ನೋಡಿದ್ದೇವೆ ಎಂದರು.
ಕಾಶ್ಮೀರದಲ್ಲಿ ಭಯೋತ್ಪಾದನೆಯ ಮೂಲವನ್ನು ಕೊನೆಗಾಣಿಸಲು ಯಾವುದೇ ಹಿಂಜರಿಕೆ ತೋರದ ಕೀರ್ತಿ ಪ್ರಧಾನಿ ಮೋದಿಯವರಿಗೆ ಸಲ್ಲುತ್ತದೆ. ನಮ್ಮ ಪ್ರಧಾನಿ ಇಂದು ವಿಶ್ವದ ಅತ್ಯಂತ ಜನಪ್ರಿಯ ನಾಯಕರಲ್ಲಿ ಒಬ್ಬರು ಎಂದು ನಮಗೆಲ್ಲರಿಗೂ ಹೆಮ್ಮೆಯಿದೆ. ಭಾರತ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ ಮತ್ತು ಸುಮಾರು ಇನ್ನೂರು ವರ್ಷಗಳ ಕಾಲ ದೇಶವನ್ನು ಆಳಿದ ಯುನೈಟೆಡ್ ಕಿಂಗ್ಡಮ್ ಅನ್ನು ಹಿಂದಿಕ್ಕಿ ಈ ಸ್ಥಾನವನ್ನು ತಲುಪಿದೆ ಎಂದಿದ್ದಾರೆ.
BIGG BREAKING NEWS: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಇಳಿಕೆ; ಕಳೆದ 24 ಗಂಟೆಗಳಲ್ಲಿ 5,554 ಹೊಸ ಪ್ರಕರಣ ಪತ್ತೆ
ಕೇರಳದಲ್ಲಿ ʻಓಣಂʼ ಸಂಭ್ರಮ: ಒಂದೇ ವಾರದಲ್ಲಿ 625 ಕೋಟಿ ರೂ. ಮೌಲ್ಯದ ಮದ್ಯ ಮಾರಾಟ!