ನಾಗ್ಪುರ್(ಮಹಾರಾಷ್ಟ್ರ): ಮಹಾರಾಷ್ಟ್ರದ ಸಕರ್ದಾರಾ ಸೇತುವೆಯ ಮೇಲೆ ವೇಗವಾಗಿ ಬರುತ್ತಿದ್ದ ಕಾರೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.
ಸಕರ್ದಾರಾ ಸೇತುವೆಯ ಮೇಲೆ ವಿರುದ್ಧ ದಿಕ್ಕಿನಲ್ಲಿ ವೇಗವಾಗಿ ಬರುತ್ತಿದ್ದ ಕಾರು ಬೈಕ್ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕ್ ಸವಾರ, ಆತನ ತಾಯಿ ಮತ್ತು ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ನಲ್ಲಿದ್ದ ಎಲ್ಲರೂ ಸೇತುವೆ ಮೇಲಿಂದ ಕಳೆಗೆ ಹಾರಿ ಬಿದ್ದಿದ್ದಾರೆ.
ಸೇತುವೆಯ ಮೇಲೆ ಕಡಿಮೆ ಜನಸಂದಣಿ ಇದ್ದ ಕಾರಣ ಕಾರು ವೇಗವಾಗಿ ಬರುತ್ತಿತ್ತು. ಈ ವೇಳೆ ಅದೇ ದಾರಿಯಲ್ಲಿ ಬರುತ್ತಿದ್ದ ಬೈಕ್ಗೆ ವಿರುದ್ಧ ದಿಕ್ಕಿನಲ್ಲಿ ಬಂದ ಕಾರು ಡಿಕ್ಕಿ ಹೊಡೆದಿದೆ. ಅಷ್ಟೇ ಅಲ್ಲದೇ, ಕಾರು ನಿಯಂತ್ರಣ ತಪ್ಪಿ ಬೈಕ್ ಸೇರಿದಂತೆ ಮೂರು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಸ್ನೇಹಿತನ ಕಾರಿನಲ್ಲಿ ಬುಟ್ಟಿಬೋರಿಗೆ ಹೋಗುತ್ತಿದ್ದ ಕಾರಿನ ಚಾಲಕ ಗಣೇಶ್ ಅಧವ್ ನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
BIG NEWS: ತ್ರಿಪುರಾ ರಾಜ್ಯಸಭಾ ಉಪಚುನಾವಣೆಗೆ ಬಿಜೆಪಿಯಿಂದ ಮಾಜಿ ಸಿಎಂ ʻಬಿಪ್ಲಬ್ ದೇಬ್ʼ ನಾಮನಿರ್ದೇಶನ | Biplab Deb
BREAKING NEWS: ಲಕ್ನೋದ ಲೆವಾನಾ ಹೋಟೆಲ್ ನಲ್ಲಿ ಅಗ್ನಿ ಅವಘಡ: ನಾಲ್ವರು ಸಜೀವ ದಹನ
ಹುಡುಗರ ಲೈಂಗಿಕ ಸಾಮರ್ಥ್ಯ “ಮ್ಯಾಗಿ ತರ ಎರಡೇ ನಿಮಿಷ” : ಬಹುಭಾಷಾ ನಟಿ ರೆಜಿನಾ ಕಸೆಂದ್ರ