ನವದೆಹಲಿ : ಬಿಜೆಪಿ ಮಾಜಿ ವಕ್ತಾರ ನೂಪುರ್ ಶರ್ಮಾ ವಿರುದ್ಧ ಬಂಧನ ಮತ್ತು ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನ ಸ್ವೀಕರಿಸಲು ಸುಪ್ರೀಂಕೋರ್ಟ್ ಶುಕ್ರವಾರ ನಿರಾಕರಿಸಿದೆ. ನೂಪುರ್ ಶರ್ಮಾ ಪ್ರವಾದಿ ಮೊಹಮ್ಮದ್ ಸಾಹೇಬ್ ವಿರುದ್ಧ ಹೇಳಿಕೆ ನೀಡಿದ್ದರು. ನಂತ್ರ ಮುಸ್ಲಿಂ ಸಮುದಾಯದ ಭಾವನೆಗಳಿಗೆ ನೋವುಂಟು ಮಾಡಿದ ಆರೋಪ ಅವ್ರ ಮೇಲಿದೆ.
ಟಿವಿ ವಾಹಿನಿಯಲ್ಲಿ ನಡೆದ ಚರ್ಚೆಯಲ್ಲಿ ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ನೂಪುರ್ ಶರ್ಮಾ ಆಕ್ಷೇಪಾರ್ಹ ಹೇಳಿಕೆಗಳನ್ನ ನೀಡಿದ್ದರು, ಇದು ದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗೆ ಕಾರಣವಾಯಿತು. ಬಿಜೆಪಿ ನೂಪುರ್ ಶರ್ಮಾ ಅವ್ರನ್ನ ಪಕ್ಷದಿಂದ ಅಮಾನತುಗೊಳಿಸಿತ್ತು. ತದನಂತರ, ಜುಲೈ 1 ರಂದು ಸುಪ್ರೀಂಕೋರ್ಟ್ʼನ ಅದೇ ಪೀಠವು ನೂಪುರ್ ಹೇಳಿಕೆಗಳನ್ನ ತೀವ್ರವಾಗಿ ಖಂಡಿಸಿತ್ತು.
ಇದಕ್ಕೂ ಮೊದಲು ಆಗಸ್ಟ್ʼನಲ್ಲಿ, ಪ್ರವಾದಿ ಮೊಹಮ್ಮದ್ ಬಗ್ಗೆ ಹೇಳಿಕೆ ನೀಡಿದ ಪ್ರಕರಣದಲ್ಲಿ ಬಿಜೆಪಿಯ ಮಾಜಿ ನಾಯಕಿ ನೂಪುರ್ ಶರ್ಮಾಗೆ ಸುಪ್ರೀಂಕೋರ್ಟ್ ದೊಡ್ಡ ರಿಲೀಫ್ ನೀಡಿತ್ತು. ನೂಪುರ್ ಶರ್ಮಾ ವಿರುದ್ಧ ದೇಶದ ವಿವಿಧ ರಾಜ್ಯಗಳಲ್ಲಿ ದಾಖಲಾದ ಎಲ್ಲಾ ಎಫ್ಐಆರ್ಗಳನ್ನ ನ್ಯಾಯಾಲಯವು ಮುಟ್ಟುಗೋಲು ಹಾಕಿಕೊಂಡು ಅವುಗಳನ್ನ ದೆಹಲಿಗೆ ವರ್ಗಾಯಿಸಿತ್ತು. ನ್ಯಾಯಾಲಯದ ಪ್ರಕಾರ, ದೆಹಲಿ ಪೊಲೀಸರು ಎಲ್ಲಾ ಪ್ರಕರಣಗಳ ಬಗ್ಗೆ ತನಿಖೆ ನಡೆಸಲಿದ್ದಾರೆ ಮತ್ತು ಅಲ್ಲಿಯವರೆಗೆ ನೂಪುರ್ ಶರ್ಮಾಗೆ ನೀಡಲಾದ ಬಂಧನದಿಂದ ರಕ್ಷಣೆ ಮುಂದುವರಿಯುತ್ತದೆ. ಅದೇ ಸಮಯದಲ್ಲಿ, ಎಫ್ಐಆರ್ ರದ್ದುಗೊಳಿಸಲು ದೆಹಲಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲು ಸುಪ್ರೀಂಕೋರ್ಟ್ ನೂಪುರ್ ಶರ್ಮಾಗೆ ಸ್ವಾತಂತ್ರ್ಯ ನೀಡಿದೆ. ಅಂದ್ಹಾಗೆ, ನೂಪುರ್ ಶರ್ಮಾ ಜೀವಕ್ಕೆ ಬೆದರಿಕೆ ಇರುವ ಹಿನ್ನೆಲೆಯಲ್ಲಿ ನ್ಯಾಯಾಲಯವು ಈ ಆದೇಶವನ್ನ ನೀಡಿತ್ತು.