ಉಡುಪಿ : ಚಿಕನ್ ಪ್ರಿಯರಿಗೆ ಬೆಲೆ ಏರಿಕೆಯ ಶಾಕ್ ಎದುರಾಗಿದ್ದು, ಕೋಳಿ ಮಾಂಸದ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ರಾಜ್ಯದಾದ್ಯಂತ ಸುರಿದ ಭಾರಿ ಮಳೆ ಹಾಗೂ ಕುಕ್ಕುಟೋದ್ಯಮದಲ್ಲಿ ಬಳಸುವ ಕಚ್ಛಾ ವಸ್ತುಗಳ ದರ ಏರಿಕೆಯ ಪರಿಣಾಮ ಕೋಳಿ ಮಾಂಸದ ಬೆಲೆ ಹೆಚ್ಚಾಗುತ್ತಿದೆ.
BIGG NEWS : ಪೊಲೀಸ್ ಇಲಾಖೆ ಸಿಬ್ಬಂದಿಯ ರಾತ್ರಿ ಪ್ರಯಾಣಕ್ಕೆ ನಿರ್ಬಂಧ ವಿಧಿಸಿ ರಾಜ್ಯ ಸರ್ಕಾರ ಆದೇಶ
ತಿಂಗಳ ಹಿಂದೆ ತೀವ್ರ ಕುಸಿತ ಕಂಡಿದ್ದ ಚಿಕನ್ ದರ ಇದೀಗ ಮತ್ತೆ ಏರಿಕೆಯಾಗುತ್ತಿದೆ. ಆಗಸ್ಟ್ನಲ್ಲಿ ಕೋಳಿ ಕೆಜಿಗೆ 100 ರೂ. ದರ ಇತ್ತು. ಸದ್ಯ 140ಕ್ಕೆ ಏರಿಕೆಯಾಗಿದೆ. ಚಿಕನ್ ಕೆಜಿಗೆ 150 ದರ ಇತ್ತು. ಇದೀಗ 200 ರೂ.ಗೆ ಹೆಚ್ಚಳವಾಗಿದೆ. ಸ್ಕಿನ್ಲೆಸ್ ಕೆ.ಜಿಗೆ 170 ರೂ. ಇತ್ತು. ಸದ್ಯ 220 ತಲುಪಿದೆ.
ರಾಜ್ಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಯಿಂದ ಕುಕ್ಕುಟೋದ್ಯಮಕ್ಕೆ ಆರ್ಥಿಕ ಹೊಡೆತ ಬಿದ್ದಿದೆ. ಕೋಳಿ ಸಾಕಣೆ ಫಾರ್ಮ್ಗಳಿಗೆ ಮಳೆಯ ನೀರು ನುಗ್ಗಿ ಲಕ್ಷಾಂತರ ಕೋಳಿಗಳು ಸಾವನ್ನಪ್ಪಿವೆ. ನಿರಂತರ ಮಳೆ ಸುರಿಯುತ್ತಲೇ ಇರುವುದರಿಂದ ತೇವಾಂಶದ ಕಾರಣಕ್ಕೆ ಕೋಳಿ ಮಾಂಸ ಉತ್ಪಾದನೆ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ ಹೀಗಾಗಿ ಕೋಳಿ ಮಾಂಸದ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ.