ಜೋಧ್ಪುರ: ಒಂದು ವರ್ಷದ ಮಗುವಾಗಿದ್ದಾಗಲೇ ವಿವಾಹವಾಗಿದ್ದ 21 ವರ್ಷದ ಯುವತಿಯ ಮದುವೆಯನ್ನು ರಾಜಸ್ಥಾನದ ಕೌಟುಂಬಿಕ ನ್ಯಾಯಾಲಯ ಅನೂರ್ಜಿತಗೊಳಿಸಿದೆ.
ಮಗುವಿಗೆ 1 ವರ್ಷವಾಗಿದ್ದಾಗಲೇ ಆಕೆಯ ಪೋಷಕರು ಮದುವೆ ಶಾಸ್ತ್ರ ನೆರವೇರಿಸಿದ್ದರು. ಯುವತಿಗೆ ಈಗ 21 ವರ್ಷವಾಗಿದೆ. ಇಷ್ಟವಿಲ್ಲದ ಈ ಬಾಲ್ಯ ವಿವಾಹದಿಂದ ನೊಂದಿದ್ದ ಯುವತಿ ತನಗೆ ನ್ಯಾಯ ಕೊಡಿಸಬೇಕೆಂದು ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದಳು.
ಸಾರಥಿ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಕೀರ್ತಿ ಭಾರ್ತಿ ಮಾತನಾಡಿ, ರೇಖಾ ಅವರು ತಮ್ಮ ಅಜ್ಜನ ನಿಧನದ ನಂತರ ತಮ್ಮ ಹಳ್ಳಿಯ ಹುಡುಗನಿಗೆ ಒಂದು ವರ್ಷದ ಮಗುವಿದ್ದಾಗಲೇ ವಿವಾಹವಾ ಮಾಡಲಾಗಿತ್ತು ಎಂದಿದ್ದಾರೆ.
ಕೆಲವು ವರ್ಷಗಳ ಹಿಂದೆ ‘ಗೌನ’ (ಮದುವೆಯ ನೆರವೇರಿಕೆಗೆ ಸಂಬಂಧಿಸಿದ ಆಚರಣೆ) ಗಾಗಿ ಆಕೆಯ ಅತ್ತೆಯಂದಿರು ರೇಖಾಗೆ ಒತ್ತಡ ಹೇರಿದ್ದರು. ಆಗ ನರ್ಸ್ ಆಗಲು ತಯಾರಿ ನಡೆಸುತ್ತಿದ್ದ ಆಕೆ ತನ್ನ ಕನಸು ಭಗ್ನಗೊಳ್ಳಲು ಬಯಸಲಿಲ್ಲ. ಹಾಗಾಗಿ ಮದುವೆ ಸಂಪ್ರದಾಯವನ್ನು ನೆರವೇರಿಸಲು ಆಕೆ ನಿರಾಕರಿಸಿದಳು. ಮದುವೆಯ ಶಾಸ್ತ್ರಗಳಿಗೆ ಒಪ್ಪದ ಆಕೆಯ ಸಂಬಂಧಿಕರು ಜಾತಿ ಪಂಚಾಯತಿ ನಡೆಸಿ ಆಕೆಗೆ 10 ಲಕ್ಷ ರೂ. ದಂಡ ವಿಧಿಸಿ ಕುಟುಂಬಕ್ಕೆ ಬೆದರಿಕೆ ಹಾಕಿದ್ದಾರೆ ಎಂದು ಕೀರ್ತಿ ಭಾರತಿ ಹೇಳಿದ್ದಾರೆ.
ಗುರುವಾರ ಕೌಟುಂಬಿಕ ನ್ಯಾಯಾಲಯದ ಅಧ್ಯಕ್ಷ ಪ್ರದೀಪ್ ಕುಮಾರ್ ಮೋದಿ ಅವರು ವಿವಾಹವನ್ನು ರದ್ದುಗೊಳಿಸುವಂತೆ ಆದೇಶಿಸಿದರು. ಶತಮಾನದಿಂದ ಬಾಲ್ಯವಿವಾಹದ ಅನಿಷ್ಟ ನಿರ್ಮೂಲನೆ ಆಗಿಲ್ಲ. ಈಗ ಎಲ್ಲರೂ ಒಟ್ಟಾಗಿ ಬಾಲ್ಯವಿವಾಹ ನಿರ್ಮೂಲನೆಗೆ ಪಣ ತೊಡಬೇಕು ಎಂದು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ನ್ಯಾಯಾಲಯದ ಆದೇಶದ ನಂತರ ಭಾವಪರವಶರಾದ ರೇಖಾ, ಇಂದು ನನ್ನ ಕನಸು ನನಸಾಗಿದೆ. ಈಗ ನಾನು ನರ್ಸ್ ಆಗುವತ್ತ ಗಮನ ಹರಿಸುತ್ತೇನೆ. ಇಂದು ನನ್ನ ಜನ್ಮದಿನ. ನನಗೆ ಇಂದು 21 ವರ್ಷವಾಗಿದೆ. 20 ವರ್ಷ ಹಿಂದಿನ ನನ್ನ ಮದುವೆಯನ್ನು ರದ್ದುಗೊಳಿಸುವಿಕೆಯು ನನಗೆ ಮತ್ತು ನನ್ನ ಕುಟುಂಬಕ್ಕೆ ಹುಟ್ಟುಹಬ್ಬದ ಉಡುಗೊರೆಯಾಗಿ ಬಂದಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಪಿಟ್ ಬುಲ್ ನಾಯಿ ದಾಳಿ: ಬಾಲಕನ ಮುಖಕ್ಕೆ ಬಿತ್ತು 200 ಹೊಲಿಗೆ… ವಿಡಿಯೋ ವೈರಲ್
BIGG NEWS : ಗಣೇಶ ಮೂರ್ತಿ ಮೆರವಣಿಗೆ ವೇಳೆ ನಟ ಉಪೇಂದ್ರ ಸಿನಿಮಾ ಶೈಲಿಯಲ್ಲಿ ಗಣೇಶಗೆ ಅವಾಜ್ : ಯುವಕ ಪೊಲೀಸರ ವಶಕ್ಕೆ
BIGG NEWS : ಸೆಪ್ಟೆಂಬರ್ 12 ರವರೆಗೆ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಭಾರೀ ಮಳೆ: ಆರೆಂಜ್ ಅಲರ್ಟ್ ಘೋಷಣೆ