ಬೆಂಗಳೂರು: ನಿಗದಿತ ಮಾನದಂಡ ಉಲ್ಲಂಘಿಸಿದಂತ ಪಡಿತರ ಚೀಟಿದಾರರಿಗೆ ಸರ್ಕಾರ ಬಿಗ್ ಶಾಕ್ ನೀಡಿದೆ. 3.30 ಲಕ್ಷ ನಕಲಿ ಪಡಿತರ ಚೀಟಿಯನ್ನು ರದ್ದುಗೊಳಿಸಿದೆ.
ಅತ್ಯಾಚಾರದ ಆರೋಪ: ನೇಪಾಳ ಕ್ರಿಕೆಟ್ ತಂಡದ ನಾಯಕನಿಗೆ ಅರೆಸ್ಟ್ ವಾರಂಟ್ ಹೊರಡಿಸಿದ ನ್ಯಾಯಾಲಯ
ರಾಜ್ಯಾಧ್ಯಂತ 21,679 ಅಂತ್ಯೋದಯ, 3,08,345 ಬಿಪಿಎಲ್ ಕಾರ್ಡ್ ರದ್ದುಗೊಳಿಸಲಾಗಿದೆ. ಹೀಗೆ ರದ್ದುಗೊಳಿಸಲಾದಂತ ಕಾರ್ಡ್ ಗಳಲ್ಲಿ ಬೆಂಗಳೂರು ನಗರದಲ್ಲೇ ಅತಿ ಹೆಚ್ಚು ನಕಲಿ ಕಾರ್ಡ್ ಗಳಿದ್ದರೇ, ಚಿತ್ರದುರ್ಗ ಜಿಲ್ಲೆಯಲ್ಲಿ ಕಡಿಮೆ ಕಾರ್ಡ್ ಪತ್ತೆಯಾಗಿವೆ.
ಈ ಬಗ್ಗೆ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯಿಂದ ಮಾಹಿತಿ ನೀಡಲಾಗಿದ್ದು, ಬೆಂಗಳೂರು ನಗರದಲ್ಲಿ 34,705, ವಿಜಯಪುರ 28,735, ಬೆಳಗಾವಿ 16,765, ಕಲಬುರ್ಗಿ 16,945, ಚಿತ್ರದುರ್ಗ 16,537 ಹಾಗೂ ರಾಯಚೂರು ಜಿಲ್ಲೆಯಲ್ಲಿ 16,693 ಸೇರಿದಂತೆ 3.30 ಲಕ್ಷ ನಕಲಿ ಪಡಿತರ ಚೀಟಿಗಳನ್ನು ರದ್ದುಗೊಳಿಸಲಾಗಿದೆ.
ಅತ್ಯಾಚಾರದ ಆರೋಪ: ನೇಪಾಳ ಕ್ರಿಕೆಟ್ ತಂಡದ ನಾಯಕನಿಗೆ ಅರೆಸ್ಟ್ ವಾರಂಟ್ ಹೊರಡಿಸಿದ ನ್ಯಾಯಾಲಯ
ಅಂದಹಾಗೇ ಬಿಪಿಎಲ್ ಅಥವಾ ಅಂತ್ಯೋದಯ ಪಡಿತರ ಚೀಟಿ ಪಡೆಯಲು ಅನರ್ಹರಿದ್ದರೂ, ಇಲಾಖೆಗೆ ತಪ್ಪು ಮಾಹಿತಿ ನೀಡಿ, ಕಾರ್ಡ್ ಪಡೆದು ಉಚಿತವಾಗಿ ಅಕ್ಕಿ, ಗೋಧಿ, ರಾಗಿ, ಸಕ್ಕರೆ ಮತ್ತು ತಾಳೆ ಎಣ್ಣೆ ಸೇರಿದಂತೆ ಇತರೆ ಪದಾರ್ಥ ಪಡೆದು ದುರುಪಯೋಗ ಮಾಡಿಕೊಳ್ಳಲಾಗಿದೆ. ಇಂತವರು ಕಾರ್ಡ್ ಗಳನ್ನು ಸ್ವಯಂ ಪ್ರೇರಿತವಾಗಿ ಹಿಂದಿರುಗಿಸಲು 2 ವರ್ಷ ಕಾಲಾವಕಾಶ ನೀಡಿದ್ದರು, ವಾಪಾಸ್ ಕೊಟ್ಟಿರಲಿಲ್ಲ. ಹೀಗಾಗಿ ಈಗ ಆ ಕಾರ್ಡ್ ದಾರರನ್ನು ಪತ್ತೆ ಹಚ್ಚಿ ರದ್ದುಪಡಿಸಲಾಗಿದೆ.