ನೇಪಾಳ : ನೇಪಾಳಿ ನ್ಯಾಯಾಲಯವು ರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕನಿಗೆ ಗುರುವಾರ ಅರೆಸ್ಟ್ ವಾರಂಟ್ ಹೊರಡಿಸಿದೆ. ಅಭಿಮಾನಿಯಾದ 17 ವರ್ಷದ ಬಾಲಕಿಯೊಬ್ಬಳು ಆತನ ಮೇಲೆ ಅತ್ಯಾಚಾರದ ಆರೋಪ ಮಾಡಿದ್ದಾಳೆ.
22ರ ಹರೆಯದ ಸಂದೀಪ್ ಲಮಿಚಾನೆ ಅವರು ಈ ಆರೋಪ ಎದುರಿಸುತ್ತಿದ್ದಾರೆ. ತನ್ನ ಅಭಿಮಾನಿಯಾದ ಬಾಲಕಿಯೊಬ್ಬಳ ಮೇಲೆ ಲಮಿಚಾನೆ ಅತ್ಯಾಚಾರವೆಸಗಿದ್ದದಾರೆ ಎಂದು ದೂರು ನೀಡಿದ್ದಾಳೆ.
ದೂರಿನಲ್ಲಿ ʻನಾನು ಕ್ರಿಕೆಟಿಗ ಸಂದೀಪ್ ಲಮಿಚಾನೆ ಅವರ ಅಭಿಮಾನಿಯಾಗಿದ್ದು, ವಾಟ್ಸಾಪ್ ಮತ್ತು ಸ್ನ್ಯಾಪ್ಚಾಟ್ ಮೂಲಕ ಅವರ ಜೊತೆ ಚಾಟ್ ಮಾತನಾಡುತ್ತಿದ್ದೆ. ಅವರನ್ನು ಆಗಾಗ್ಗೆ ಭೇಟಿಯಾಗುತ್ತಿದ್ದೆ. ಅವರು ನಮ್ಮ ಮೊದಲ ಭೇಟಿಯಲ್ಲೇ ಪ್ರಪೋಸ್ ಮಾಡಿದ್ದರು. ಆಗಸ್ಟ್ 21 ರಂದು ಕಠ್ಮಂಡುವಿನ ಖಾಸಗಿ ಹೊಟೇಲ್ ಒಂದರಲ್ಲಿ ಭೇಟಿಯಾದಾಗ ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆʼ.
“ಹೆಚ್ಚಿನ ತನಿಖೆಗಾಗಿ ಜಿಲ್ಲಾ ನ್ಯಾಯಾಲಯವು ಸಂದೀಪ್ ಲಮಿಚಾನೆ ವಿರುದ್ಧ ಬಂಧನ ವಾರಂಟ್ ಹೊರಡಿಸಿದೆ” ಎಂದು ಕಠ್ಮಂಡು ಜಿಲ್ಲಾ ಪೊಲೀಸ್ ವಕ್ತಾರ ದಿನೇಶ್ ಮೈನಾಲಿ ಎಎಫ್ಪಿಗೆ ತಿಳಿಸಿದ್ದಾರೆ.
ಲಾಮಿಚಾನೆ ಕಳೆದ ವರ್ಷ ನೇಪಾಳದ ರಾಷ್ಟ್ರೀಯ ತಂಡದ ನಾಯಕರಾಗಿ ನೇಮಕಗೊಂಡಿದ್ದರು.
BIGG NEWS : ಇಂದು ತುಮಕೂರು ಮಹಾನಗರ ಪಾಲಿಕೆ ಚುನಾವಣೆ : ಕಾಂಗ್ರೆಸ್ ಗೆ ಮೇಯರ್ ಪಟ್ಟ!
ತಮ್ಮ ಕುಟುಂಬ ಸಮೇತ ʻಕರ್ತವ್ಯ ಪಥʼಕ್ಕೆ ಭೇಟಿ ನೀಡುವಂತೆ ನಾಗರಿಕರನ್ನು ಆಹ್ವಾನಿಸಿದ ಪ್ರಧಾನಿ ಮೋದಿ!