ನವದೆಹಲಿ : ವಸಾಹತುಶಾಹಿಯ ಸಂಕೇತ ‘ಕಿಂಗ್ಸ್ ವೇ’ ಒಂದು ಇತಿಹಾಸವಾಗಿರುತ್ತದೆ ಮತ್ತು ಅದನ್ನು ಶಾಶ್ವತವಾಗಿ ಅಳಿಸಿಹಾಕಲಾಗಿದೆ. ಕರ್ತವ್ಯ ಪಥದ ರೂಪದಲ್ಲಿ ಒಂದು ಹೊಸ ಯುಗ ಪ್ರಾರಂಭವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಕರ್ತವ್ಯ ಪಥ ಉದ್ಘಾಟನೆಯ ನಂತ್ರ ಮಾತನಾಡಿದ ಪ್ರಧಾನಿ ಮೋದಿ, ವಸಾಹತುಶಾಹಿಯ ಸಂಕೇತ ‘ಕಿಂಗ್ಸ್ ವೇ’ ಒಂದು ಇತಿಹಾಸವಾಗಿದ್ದು, ಅದನ್ನ ಶಾಶ್ವತವಾಗಿ ಅಳಿಸಿಹಾಕಲಾಗಿದೆ. ಕರ್ತವ್ಯ ಪಥದ ರೂಪದಲ್ಲಿ ಒಂದು ಹೊಸ ಯುಗ ಪ್ರಾರಂಭವಾಗಿದೆ. ನಾವು ವಸಾಹತುಶಾಹಿಯ ಮತ್ತೊಂದು ಸಂಕೇತದಿಂದ ಹೊರಬರುತ್ತಿರುವಾಗ ನಾನು ದೇಶದ ಎಲ್ಲಾ ಜನರನ್ನ ಅಭಿನಂದಿಸುತ್ತೇನೆ” ಎಂದರು.
Symbol of colonialism 'Kingsway' will be a history and has been erased forever. A new era has begun in the form of Kartvyapath. I congratulate all the people of the country as we come out from another symbol of colonialism: PM Modi pic.twitter.com/sfLdYZdCIT
— ANI (@ANI) September 8, 2022
ಇನ್ನು ಕಳೆದ 8 ವರ್ಷಗಳಲ್ಲಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮುದ್ರೆಯನ್ನು ಹೊಂದಿರುವ ಹಲವಾರು ನಿರ್ಧಾರಗಳನ್ನು ನಾವು ತೆಗೆದುಕೊಂಡಿದ್ದೇವೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ರಾಷ್ಟ್ರಧ್ವಜ ಹಾರಿಸಿದ ‘ಅಖಂಡ ಭಾರತ’ದ ಮೊದಲ ಮುಖ್ಯಸ್ಥರಾಗಿದ್ದರು” ಎಂದರು.
ಇಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಬೃಹತ್ ಪ್ರತಿಮೆಯನ್ನ ಇಂಡಿಯಾ ಗೇಟ್ ಬಳಿ ಸ್ಥಾಪಿಸಲಾಗಿದೆ. ಬ್ರಿಟಿಷ್ ಆಳ್ವಿಕೆಯ ಸಮಯದಲ್ಲಿ, ಬ್ರಿಟಿಷರ ಪ್ರತಿನಿಧಿಯ ಪ್ರತಿಮೆಯು ಇಲ್ಲಿ ಇತ್ತು. ನೇತಾಜಿ ಅವರ ಪ್ರತಿಮೆಯ ಸ್ಥಾಪನೆಯೊಂದಿಗೆ, ನಾವು ಸಶಕ್ತ ಭಾರತಕ್ಕೆ ಹೊಸ ಮಾರ್ಗವನ್ನ ಸ್ಥಾಪಿಸಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.
ಇನ್ನು ಇಂದು, ದೇಶವು ಬ್ರಿಟಿಷರ ಕಾಲದಿಂದಲೂ ಇದ್ದ ವಿವಿಧ ಕಾನೂನುಗಳನ್ನು ಬದಲಾಯಿಸಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ, ಈಗ ದೇಶದ ಯುವಕರು ವಿದೇಶಿ ಭಾಷೆಯ ಬಲವಂತದಿಂದ ಮುಕ್ತರಾಗುತ್ತಿದ್ದಾರೆ ಎಂದು ಹೇಳಿದರು.