ನವದೆಹಲಿ : ಭಾರತದಲ್ಲಿನ ಯುಎಸ್ ಮಿಷನ್ 2022ರಲ್ಲಿ ದಾಖಲೆಯ 82,000 ವಿದ್ಯಾರ್ಥಿ ವೀಸಾಗಳನ್ನ ಬಿಡುಗಡೆ ಮಾಡಿದೆ, ಇದು ಇತರ ಯಾವುದೇ ದೇಶಕ್ಕಿಂತ ಹೆಚ್ಚಾಗಿದೆ. ಇದು ಯುನೈಟೆಡ್ ಸ್ಟೇಟ್ಸ್ನಲ್ಲಿ ಅಧ್ಯಯನ ಮಾಡುತ್ತಿರುವ ಎಲ್ಲಾ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಲ್ಲಿ ಸುಮಾರು 20 ಪ್ರತಿಶತದಷ್ಟು ಜನರನ್ನ ಒಳಗೊಂಡಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
“ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಹಿಂದಿನ ವರ್ಷಗಳಲ್ಲಿ ಉಂಟಾದ ವಿಳಂಬದ ನಂತರ ಅನೇಕ ವಿದ್ಯಾರ್ಥಿಗಳು ವೀಸಾಗಳನ್ನ ಸ್ವೀಕರಿಸಲು ಮತ್ತು ತಮ್ಮ ವಿಶ್ವವಿದ್ಯಾಲಯಗಳನ್ನ ತಲುಪಲು ಸಾಧ್ಯವಾಗಿದ್ದನ್ನ ನೋಡಿ ನಮಗೆ ಸಂತೋಷವಾಗಿದೆ. ಈ ಬೇಸಿಗೆಯಲ್ಲಿಯೇ ನಾವು 82,000ಕ್ಕೂ ಹೆಚ್ಚು ವಿದ್ಯಾರ್ಥಿ ವೀಸಾಗಳನ್ನು ನೀಡಿದ್ದೇವೆ, ಇದು ಹಿಂದಿನ ವರ್ಷಕ್ಕಿಂತ ಹೆಚ್ಚಾಗಿದೆ ಎಂದು ಯುಎಸ್ ಚಾರ್ಜ್ ಡಿ’ಅಫೇರ್ಸ್ ಪೆಟ್ರೀಷಿಯಾ ಲಸಿನಾ ಸೆಪ್ಟೆಂಬರ್ 6ರಂದು ಹೇಳಿದರು.
ನವದೆಹಲಿಯಲ್ಲಿರುವ ಯುಎಸ್ ರಾಯಭಾರ ಕಚೇರಿ ಮತ್ತು ಚೆನ್ನೈ, ಹೈದರಾಬಾದ್, ಕೋಲ್ಕತಾ ಮತ್ತು ಮುಂಬೈನ ನಾಲ್ಕು ಕಾನ್ಸುಲೇಟ್ಗಳು ಮೇನಿಂದ ಆಗಸ್ಟ್ವರೆಗೆ ವಿದ್ಯಾರ್ಥಿ ವೀಸಾ ಅರ್ಜಿಗಳ ಪ್ರಕ್ರಿಯೆಗೆ ಆದ್ಯತೆ ನೀಡಿವೆ.