ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕೆಲ ನಿಮಿಶಗಳ ಹಿಂದೆ ‘ಕರ್ತವ್ಯ ಪಥ’ & ಸುಭಾಷ್ ಚಂದ್ರ ಬೋಸ್ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದರು.
ಹೊಸ ‘ಕರ್ತವ್ಯ ಪಥ’ ವಿಸ್ತರಣೆಯು ಸುಂದರ, ಪಾದಚಾರಿ ಮಾರ್ಗಗಳೊಂದಿಗೆ ಹುಲ್ಲುಹಾಸುಗಳು, ನವೀಕರಿಸಿದ ಕಾಲುವೆಗಳು, ಹೊಸ ಸೌಲಭ್ಯ ಬ್ಲಾಕ್ಗಳು, ಸುಧಾರಿತ ಸೂಚನಾ ಫಲಕಗಳು ಇರಲಿದೆ. ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಸೆಂಟ್ರಲ್ ವಿಸ್ಟಾ ಪುನರಾಭಿವೃದ್ಧಿ ಯೋಜನೆಯ ಅಡಿಯಲ್ಲಿ ಇಡೀ ವಿಸ್ತರಣೆಯನ್ನು ನವೀಕರಿಸಲಾಗಿದೆ. ಹೊಸ ಪಾದಚಾರಿ ಅಂಡರ್ ಪಾಸ್ ಗಳು, ಸುಧಾರಿತ ಪಾರ್ಕಿಂಗ್ ಸ್ಥಳಗಳು, ಹೊಸ ಪ್ರದರ್ಶನ ಫಲಕಗಳು ಮತ್ತು ನವೀಕರಿಸಿದ ರಾತ್ರಿ ಲೈಟಿಂಗ್ ಗಳು ಸಾರ್ವಜನಿಕ ಅನುಭವವನ್ನು ಹೆಚ್ಚಿಸುವ ಇತರ ಕೆಲವು ವೈಶಿಷ್ಟ್ಯಗಳಾಗಿವೆ.
ಸರ್ಕಾರದ ಪ್ರಕಾರ, ಹಿಂದಿನ ರಾಜಪಥವು ಅಧಿಕಾರದ ಐಕಾನ್ ಆಗಿದ್ದರಿಂದ ಕರ್ತವ್ಯ ಪಥಕ್ಕೆ ಸಾರ್ವಜನಿಕ ಮಾಲೀಕತ್ವ ಮತ್ತು ಸಬಲೀಕರಣದ ಉದಾಹರಣೆಯಾಗಿ ಬದಲಾಗುವುದನ್ನು ಇದು ಸಂಕೇತಿಸುತ್ತದೆ. ಇದೇ ವೇಳೇ ಇಂಡಿಯಾ ಗೇಟ್ ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 28 ಅಡಿ ಎತ್ತರದ ಪ್ರತಿಮೆಯನ್ನು ಪ್ರಧಾನಿ ಮೋದಿ ಅನಾವರಣಗೊಳಿಸಿದ್ದಾರೆ.
Delhi | PM Modi unveils the statue of Netaji Subhas Chandra Bose near India Gate and pays floral tributes to him
(Source: DD) pic.twitter.com/7FIPH8TiX9
— ANI (@ANI) September 8, 2022
Delhi | PM Narendra Modi arrives at India Gate to inaugurate revamped Central Vista & unveil the statue of Netaji Subhas Chandra Bose near India Gate pic.twitter.com/BWdpValjBI
— ANI (@ANI) September 8, 2022