ಕೆಎನ್ಎನ್ಡಿಜಿಟಲ್ ಡೆಸ್ಕ್ : ಹಾವಿಗೆ ಯಾರು ತಾನೇ ಎದುರುವುದಿಲ್ಲ ಹೇಳಿ.? ಇನ್ನು ನಾಗರಹಾವಿನ ಬಗ್ಗೆ ಮಾತನಾಡಿದ್ರೆ ಸಾಕು, ಅದೆಷ್ಟೋ ಹೆಸರಿ ನಡುಗುತ್ತಾರೆ. ಆದ್ರೆ, ಇಂದು ಹಾವಿನ ಕುರಿತಾದ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬ ಕೋಪಗೊಂಡು, ಓಡಾಡುತ್ತಿದ್ದ ಹಾವನ್ನ ಕಚ್ಚಿ ಕಚ್ಚಿ ಜಗಿದು ಕೊಂದಿದ್ದಾನೆ. ಇದರ ನಂತ್ರ ಆತ ಸತ್ತ ಹಾವನ್ನ ತನ್ನ ಕುತ್ತಿಗೆಗೆ ಸುತ್ತಿಕೊಂಡು ಇಡೀ ಹಳ್ಳಿಯಲ್ಲಿ ಅಲೆದಾಡಿದ್ದಾನೆ.
ದರಾಡ ಗ್ರಾಮದಲ್ಲಿ ಈ ಘಟನೆ ನಡೆದಿದೆ..!
ಜಿಲ್ಲೆಯ ಬಸ್ತಾ ಪೊಲೀಸ್ ಠಾಣೆ ವ್ಯಾಪ್ತಿಯ ದರಾಡ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ, ಸಲೀಂ ನಾಯಕ್ ತನ್ನ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ನಾಗರಹಾವು ಆತನಿಗೆ ಕಚ್ಚಿದೆ. ಕೋಪೋದ್ರಿಕ್ತನಾದ ಸಲೀಂ ವಿಷಪೂರಿತ ಹಾವನ್ನ ಹಿಡಿದು ಆತನೂ ಅದನ್ನ ಕಚ್ಚಿ, ಅಗಿದು ಸಾಯಿಸಿದನೆಂದು ಹೇಳಲಾಗ್ತಿದೆ. ನಂತ್ರ ಆತ ಸತ್ತ ಹಾವನ್ನ ಕುತ್ತಿಗೆಗೆ ಸುತ್ತಿಕೊಂಡು ಸ್ಥಳೀಯ ಮಾರುಕಟ್ಟೆಯಲ್ಲಿ ಸೈಕಲ್ ಮೇಲೆ ಸುತ್ತಾಡಿದ್ದಾನೆ.
ಈ ಅಸಾಮಾನ್ಯ ದೃಶ್ಯವನ್ನ ನೋಡಿದ ಸ್ಥಳೀಯರಲ್ಲಿ ಆತಂಕದ ವಾತಾವರಣ ದೃಷ್ಟಿಯಾಗಿದೆ. “ಸಲೀಂ ಸತ್ತ ನಾಗರಹಾವು ಕುತ್ತಿಗೆಯಲ್ಲಿ ಸೈಕಲ್ʼನಲ್ಲಿ ಹೋಗುತ್ತಿರುವುದನ್ನ ನಾವು ನೋಡಿದ್ದೇವೆ. ಸಲೀಂ ತಾನು ತಂತ್ರಿ ಎಂದು ಹೇಳಿಕೊಳ್ಳುತ್ತಾನೆ ಮತ್ತು ಆಸ್ಪತ್ರೆಗೆ ಹೋಗುವ ಬದಲು ಬ್ಲ್ಯಾಕ್ ಮ್ಯಾಜಿಕ್ ಸಹಾಯದಿಂದ ಚಿಕಿತ್ಸೆ ಪಡೆದಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಹಾವು ಕಡಿತದ ಅತಿ ಹೆಚ್ಚು ಘಟನೆಗಳು ಎಲ್ಲಿ ಸಂಭವಿಸುತ್ತವೆ?
ಭಾರತವನ್ನು ಹಾವಾಡಿಗರ ದೇಶ ಎಂದು ಕರೆಯಲಾಗಿದ್ದರೂ, ಅಮೆರಿಕದಲ್ಲಿ ಹಾವು ಕಡಿತದ ಘಟನೆಗಳು ಹೆಚ್ಚು ಸಂಭವಿಸುತ್ತವೆ ಎಂದು ತಿಳಿದ್ರೆ ನಿಮಗೆ ಆಶ್ಚರ್ಯವಾಗಬಹುದು. ಆದ್ರೆ, ಉತ್ತಮ ಚಿಕಿತ್ಸೆಯಿಂದಾಗಿ, ಸಾವಿನ ಪ್ರಕರಣ ಅತೀ ವಿರಳ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಜಗತ್ತಿನಲ್ಲಿ ಪ್ರತಿ ವರ್ಷ ಸುಮಾರು ಐದು ಮಿಲಿಯನ್ ಹಾವು ಕಡಿತದ ಘಟನೆಗಳು ನಡೆಯುತ್ತಿವೆ. ಇವುಗಳಲ್ಲಿ, ಸುಮಾರು ಎರಡೂವರೆ ಕೋಟಿ ಪ್ರಕರಣಗಳಲ್ಲಿ ಮಾನವನ ಆರೋಗ್ಯವು ಹದಗೆಡುತ್ತದೆ. ಇದಲ್ಲದೆ, ಪ್ರತಿ ವರ್ಷ ಸುಮಾರು 81 ಸಾವಿರದಿಂದ 1,38,000 ಜನರು ಹಾವು ಕಡಿತದಿಂದ ಸಾಯುತ್ತಾರೆ.