ಭೋಪಾಲ್: 19 ವರ್ಷದ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳನ್ನು ಹಿಂಬಾಲಿಸಿ, ಆಕೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳದಿದ್ದರೆ ಆ್ಯಸಿಡ್ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಮಧ್ಯಪ್ರದೇಶದಲ್ಲಿ ಬಂಧಿಸಲಾಗಿದೆ.
22 ವರ್ಷದ ಮೋನು ಮನ್ಸೂರಿ ಸೋಮವಾರ ಮಹಿಳೆಯನ್ನು ಎದುರಿಸಿ, ಆಕೆಯ ಮೇಲೆ ಹೂಗಳ ಮಳೆ ಸುರಿಸಿದ್ದಾನೆ ಎಂದು ಆರೋಪಿಸಲಾಗಿದೆ. ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿದೆ. ಈ ವರ್ಷದ ಜನವರಿಯಲ್ಲಿ ಮೋನು ಮನ್ಸೂರಿ ಇನ್ನೊಬ್ಬ ಮಹಿಳೆಗೆ ಬೆದರಿಕೆ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ, ನಂತರ ಅವರನ್ನು ಜೈಲಿಗೆ ಕಳುಹಿಸಲಾಯಿತು. ನಂತರ ಅವರಿಗೆ ಜಾಮೀನು ಮೇಲೆ ಹೊರ ಬಂದಿದ್ದಾನೆ ಎನ್ನಲಾಗಿದೆ. 22 ವರ್ಷದ ಮೋನು ಮನ್ಸೂರಿ 19 ವರ್ಷದ ನರ್ಸಿಂಗ್ ಯುವತಿಯನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿ ವಿವಾಹವಾಗಲು ಹೇಳಿದ್ದಾನೆ ಎನ್ನಲಾಗಿದೆ. ಇದಲ್ಲದೇ ತನ್ನ ಮಾತು ಕೇಳದೇ ಇದ್ದರೆ ಆ್ಯಸಿಡ್ ದಾಳಿ ಮಾಡುವ ಪ್ರಾಣ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರತಿದಿನವೂ ನಮ್ಮ ಹಳ್ಳಿಯಿಂದ ಕಾಲೇಜಿಗೆ ನನ್ನನ್ನು ಹಿಂಬಾಲಿಸುತ್ತಿದ್ದ. ಒಂದು ದಿನ ಅವನು ನನ್ನ ಕೈ ಹಿಡಿದನು ಆ ವೇಳೆಯಲ್ಲಿ ನಾನು ಕೂಗಿ ಕೊಂಡೆ, ಈವೇಳೆಯಲ್ಲಿ ಅವನು ನನ್ನ ಮೇಲೆ ಹೂವುಗಳನ್ನು ಎಸೆದು ನನ್ನನ್ನು ಕೊಲ್ಲುವುದಾಗಿ ಹೇಳಿದನು ಅಂತ ಯುವತಿ ಹೇಳಿದ್ದಾಳೇ.