ಮುಂಬೈ : 1993ರ ಮುಂಬೈ ಸ್ಫೋಟದ ಅಪರಾಧಿ ಯಾಕೂಬ್ ಮೆಮನ್ ಸಮಾಧಿಯನ್ನ ಅಮೃತಶಿಲೆಯ ಗಡಿ ಮತ್ತು ಎಲ್ಇಡಿ ಲೈಟಿಂಗ್ನೊಂದಿಗೆ ನವೀಕರಿಸಲಾಗಿದ್ದು, ಸಧ್ಯ ವಿವಾದ ಭುಗಿಲೆದ್ದಿದೆ. ಆಂಗ್ಲ ಮಾಧ್ಯಮವೊಂದು ಈ ವಿಷಯವನ್ನು ಬೆಳಕಿಗೆ ತಂದ ನಂತರ, ಮಹಾರಾಷ್ಟ್ರ ಸರ್ಕಾರವು ಈ ಬಗ್ಗೆ ತನಿಖೆಗೆ ಆದೇಶಿಸಿತು.
ಅಚ್ಚರಿಯೆಂದ್ರೆ ಈ ಸಂಗತಿ ಬೆಳಕಿಗೆ ಬಂದ್ಮೇಲೆ ಯಾಕೂಬ್ ಮೆಮೊನ್ ಸಮಾಧಿಯ ಸುತ್ತಲೂ ಅಲಂಕಾರಿಕ ಎಲ್ಇಡಿ ದೀಪಗಳನ್ನ ಇಂದು ಬೆಳಿಗ್ಗೆ ತೆಗೆದುಹಾಕಲಾಗಿದೆ.
ಇದಕ್ಕೂ ಮೊದಲು, ಜುಮಾ ಮಸೀದಿಯ ಅಧ್ಯಕ್ಷರು ಸಮಾಧಿಯನ್ನ ಅಲಂಕರಿಸಲಾಗಿದೆ ಅನ್ನೋದನ್ನ ಒಪ್ಪಿಕೊಂಡರು. ಆದ್ರೆ, ಯಾಕೂಬ್ ಸಮಾಧಿಗೆ ಹಾಗೆ ಮಾಡಲು ಯಾವುದೇ ವಿಶೇಷ ಅನುಮತಿಯನ್ನ ನೀಡಲಾಗಿಲ್ಲ ಎಂದು ಗಮನಿಸಿದರು. ಮುಂಬೈನಲ್ಲಿ ಯಾಕೂಬ್ʼನನ್ನ ಸಮಾಧಿ ಮಾಡುವ ಬಡಾ ಕಬ್ರಸ್ತಾನ್ ಸ್ಥಳವು ಸಮಾಧಿ ವಕ್ಫ್ ಮಂಡಳಿಯ ವ್ಯಾಪ್ತಿಗೆ ಬರುತ್ತದೆ.
ರಾಜ್ಯದಲ್ಲಿ ಶಿವಸೇನೆ-ಕಾಂಗ್ರೆಸ್-ಎನ್ಸಿಪಿ ಮೈತ್ರಿ ಎಂವಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಉದ್ಧವ್ ಠಾಕ್ರೆ ಆಳ್ವಿಕೆಯಲ್ಲಿ ಇದನ್ನ ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. “ಯಾಕೂಬ್ ಮೆನನ್ ಸಮಾಧಿಯನ್ನ ದೇವಾಲಯವಾಗಿ ಪರಿವರ್ತಿಸಿದಾಗ ಉದ್ಧವ್ ಠಾಕ್ರೆ ಏಕೆ ಮೌನವಾಗಿದ್ದರು?” ಎಂದು ಬಿಜೆಪಿ ನಾಯಕ ರಾಮ್ ಕದಮ್ ಪ್ರಶ್ನಿಸಿದ್ದಾರೆ.
“ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿದ್ದರು. ಆ ಅವಧಿಯಲ್ಲಿ, ಪಾಕಿಸ್ತಾನದ ಆಣತಿಯಂತೆ 1993ರಲ್ಲಿ ಮುಂಬೈನಲ್ಲಿ ಬಾಂಬ್ ದಾಳಿ ನಡೆಸಿದ ಭಯಾನಕ ಭಯೋತ್ಪಾದಕ ಯಾಕೂಬ್ ಮೆಮೊನ್ʼನ ಸಮಾಧಿಯು ದೇವಾಲಯವಾಗಿ ಮಾರ್ಪಟ್ಟಿತು. ಇದು ಮುಂಬೈನ ಮೇಲಿನ ಅವರ ಪ್ರೀತಿ, ಇದು ಅವರ ದೇಶಭಕ್ತಿಯೇ? ಉದ್ಧವ್ ಠಾಕ್ರೆ ಸೇರಿದಂತೆ ಶರದ್ ಪವಾರ್ ಮತ್ತು ರಾಹುಲ್ ಗಾಂಧಿ ಮುಂಬೈನ ಜನರಲ್ಲಿ ಕ್ಷಮೆಯಾಚಿಸಬೇಕು ” ಎಂದು ಬಿಜೆಪಿ ನಾಯಕ ರಾಮ್ ಕದಮ್ ಟ್ವೀಟ್ ಮಾಡಿದ್ದಾರೆ.