ನವದೆಹಲಿ : ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗುತ್ತಿರುವುದು “ಸಾಮಾನ್ಯ ಸಾಧನೆಯಲ್ಲ” ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.
ಗುಜರಾತ್ನ ಸೂರತ್ನಲ್ಲಿ ವೈದ್ಯಕೀಯ ಶಿಬಿರವನ್ನುದ್ದೇಶಿಸಿ ವರ್ಚುವಲ್ ಆಗಿ ಮಾತನಾಡಿದ ಪ್ರಧಾನಿ ಮೋದಿ, “ಈ ಅಮೃತ ಕಾಲದಲ್ಲಿ ಇನ್ನೂ ಹೆಚ್ಚು ಕಷ್ಟಪಟ್ಟು ಕೆಲಸ ಮಾಡಲು ಮತ್ತು ದೊಡ್ಡ ಗುರಿಗಳನ್ನ ಸಾಧಿಸಲು ಈ ಸಾಧನೆಯು ನಮಗೆ ಆತ್ಮವಿಶ್ವಾಸವನ್ನ ನೀಡಿತು” ಎಂದು ಹೇಳಿದರು. ಈ ಪ್ರಗತಿ ಸಾಮಾನ್ಯವಾದುದಲ್ಲ. ಪ್ರತಿಯೊಬ್ಬ ಭಾರತೀಯನೂ ಅದರ ಬಗ್ಗೆ ಹೆಮ್ಮೆ ಪಡುತ್ತಿದ್ದಾನೆ. ನಾವು ಈ ಉತ್ಸಾಹವನ್ನ ಕಾಪಾಡಿಕೊಳ್ಳಬೇಕು” ಎಂದು ಹೇಳಿದರು.
ಬ್ಲೂಮ್ಬರ್ಗ್ನಲ್ಲಿ ಇತ್ತೀಚಿನ ಲೆಕ್ಕಾಚಾರಗಳ ಪ್ರಕಾರ, 2022ರ ಮಾರ್ಚ್ ಅಂತ್ಯದಲ್ಲಿ ಭಾರತವು ಯುನೈಟೆಡ್ ಕಿಂಗ್ಡಮ್ʼನ್ನ ಹಿಂದಿಕ್ಕಿ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ.
ಸೂರತ್ನ ಓಲ್ಪಾಡ್ನಲ್ಲಿ ಆಯೋಜಿಸಲಾದ ವೈದ್ಯಕೀಯ ಶಿಬಿರದಲ್ಲಿ ಭಾಗವಹಿಸಿದ್ದ ವಿವಿಧ ಸರ್ಕಾರಿ ಯೋಜನೆಗಳ ಫಲಾನುಭವಿಗಳು ಮತ್ತು ಹಾಜರಿದ್ದವರನ್ನುದ್ದೇಶಿಸಿ ಪ್ರಧಾನಿ ಮೋದಿ ವರ್ಚುವಲ್ ಆಗಿ ಮಾತನಾಡುತ್ತಿದ್ದರು.
ಕೇಂದ್ರದ ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನ ಶ್ಲಾಘಿಸಿದ ಮೋದಿ, “ಕಳೆದ ಎಂಟು ವರ್ಷಗಳಲ್ಲಿ ಸರ್ಕಾರವು ಬಡವರಿಗಾಗಿ ದೇಶಾದ್ಯಂತ ಮೂರು ಕೋಟಿ ಮನೆಗಳನ್ನ ನಿರ್ಮಿಸಿದೆ. ಈ ಪೈಕಿ ಸುಮಾರು 10 ಲಕ್ಷ ಮನೆಗಳನ್ನು ಗುಜರಾತ್ ಒಂದರಲ್ಲೇ ನಿರ್ಮಿಸಲಾಗಿದೆ” ಎಂದರು.
ಇತರ ಕೇಂದ್ರ ಯೋಜನೆಗಳ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, “ಇಂದು, ಗುಜರಾತ್ನ ಶೇಕಡಾ 97ರಷ್ಟು ಗ್ರಾಮೀಣ ಕುಟುಂಬಗಳು ನಲ್ಲಿ ನೀರನ್ನ ಪಡೆಯುತ್ತಿವೆ. ಪಿಎಂ-ಕಿಸಾನ್ ಸಮ್ಮಾನ್ ನಿಧಿಯಡಿ, 2 ಲಕ್ಷ ಕೋಟಿ ರೂ.ಗಳನ್ನು ನೇರವಾಗಿ ದೇಶದ ರೈತರ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂದು ಹೇಳಿದರು.