ನವದೆಹಲಿ : ಭಾರತೀಯ ರೈಲ್ವೆ ಯಾವಾಗಲೂ ಪ್ರಯಾಣಿಕರ ರೈಲು ಪ್ರಯಾಣವನ್ನ ಸುಲಭ ಮತ್ತು ಆರಾಮದಾಯಕವಾಗಿಸಲು ಪ್ರಯತ್ನಿಸಿದೆ. ವಿಶೇಷ ರೈಲು ಸೇವೆಗಳನ್ನ ಪ್ರಾರಂಭಿಸುವುದರಿಂದ ಹಿಡಿದು ಸಾಕುಪ್ರಾಣಿಗಳನ್ನ ಅನುಮತಿಸುವವರೆಗೂ, ಪ್ರಯಾಣಿಕರಿಗೆ ಅನುಕೂಲವನ್ನ ಒದಗಿಸುವ ವಿಷಯಕ್ಕೆ ಬಂದಾಗ ಭಾರತೀಯ ರೈಲ್ವೆ ಎಂದಿಗೂ ಹಿಂದೆ ಬಿದ್ದಿಲ್ಲ. ಅದ್ರಂತೆ, ಸಾಕುಪ್ರಾಣಿಗಳು ನಿಜವಾಗಿಯೂ ಕುಟುಂಬ ಸದಸ್ಯರಂತೆ ಮತ್ತು ಆದ್ದರಿಂದ, ಭಾರತೀಯ ರೈಲ್ವೆಯು ಕಾನೂನುಬದ್ಧ ಸಂಸ್ಥೆಯ ಕೆಲವು ಮಾರ್ಗಸೂಚಿಗಳನ್ನ ಅನುಸರಿಸುವ ಮೂಲಕ ಪ್ರಯಾಣಿಕರಿಗೆ ತಮ್ಮ ಸಾಕುಪ್ರಾಣಿಗಳೊಂದಿಗೆ ಪ್ರಯಾಣಿಸಲು ಅತ್ಯಂತ ಸುಲಭಗೊಳಿಸಿದೆ. ಆನೆಗಳಿಂದ ಹಿಡಿದು ಪಕ್ಷಿಗಳವರೆಗೆ ಪ್ರಾಣಿಗಳ ಗಾತ್ರವನ್ನು ಅವಲಂಬಿಸಿ ಅನುಸರಿಸಬೇಕಾದ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ರೈಲ್ವೆ ಹೊಂದಿದೆ. ಕೆಲವು ಪ್ರಾಣಿಗಳನ್ನ ಪ್ರತ್ಯೇಕ ನಿಯೋಜಿತ ಬೋಗಿಗಳಲ್ಲಿ ಸಾಗಿಸಬೇಕಾದರೂ, ಬೆಕ್ಕುಗಳು ಮತ್ತು ನಾಯಿಗಳಂತಹ ಸಾಕು ಪ್ರಾಣಿಗಳು ಅದೇ ಬೋಗಿಗಳಲ್ಲಿ ತಮ್ಮ ಯಜಮಾನರೊಂದಿಗೆ ಹೋಗಬಹುದು.
Friendly for Everyone!
Indian Railways for You. https://t.co/emrwf8A0uG
— Ministry of Railways (@RailMinIndia) September 2, 2022
ಇತ್ತೀಚೆಗೆ ಪ್ರಯಾಣಿಕರೊಬ್ಬರು ತನ್ನ ಸಾಕುಪ್ರಾಣಿಯೊಂದಿಗೆ ಪ್ರಯಾಣಿಸಿದ್ದು, ಭಾರತೀಯ ರೈಲ್ವೆಗೆ ಧನ್ಯವಾದ ಅರ್ಪಿಸಿದ್ದಾರೆ. ಟ್ವಿಟ್ಟರ್ʼನಲ್ಲಿ “ಭಾರತೀಯ ರೈಲ್ವೆಗೆ ತುಂಬಾ ಧನ್ಯವಾದಗಳು. ನಾನು ಪ್ರಕ್ರಿಯೆಯನ್ನ ಅನುಸರಿಸಿದೆ ಮತ್ತು ನನಗೆ ಮತ್ತು ನನ್ನ ಗುಸ್ಸಿಗೆ ಕೂಪೆಯನ್ನ ಹಂಚಿಕೆ ಮಾಡಲಾಗಿದೆ. ನಾವಿಬ್ಬರೂ ಈಗ ತುಂಬಾ ಸಂತೋಷವಾಗಿದ್ದೇವೆ” ಎಂದು ಪ್ರಯಾಣಿಕರು ಟ್ವೀಟ್ ಮಾಡಿದ್ದಾರೆ. ಇದಕ್ಕೆ “ಎಲ್ಲರಿಗೂ ಸ್ನೇಹಪರ! ಭಾರತೀಯ ರೈಲ್ವೆ ನಿಮಗಾಗಿ” ಎಂದು ಭಾರತೀಯ ರೈಲ್ವೆ ಟ್ವೀಟ್ ಮಾಡಿದೆ.