ನವದೆಹಲಿ : ಮಳೆಗಾಲದಲ್ಲಿ ಜನರ ಓಡಾಟಕ್ಕೆ ಅನುಕೂಲವಾಗುವಂತೆ ಈ ಸೇತುವೆಯನ್ನ ನಿರ್ಮಿಸಲಾಗಿದೆ. ಸೆಪ್ಟೆಂಬರ್ 6ರಂದು ಇದನ್ನ ಉದ್ಘಾಟಿಸಲು ಅಧಿಕಾರಿಗಳು ಬಂದಿದ್ದು, ಉದ್ಘಾಟನೆಯ ಸಮಯದಲ್ಲಿ ಸೇತುವೆ ಕುಸಿದಿದೆ. ಭದ್ರತಾ ಸಿಬ್ಬಂದಿ ತಮ್ಮ ಚಾಕಚಕ್ಕತೆಯಿಂದ ಹೇಗೋ ಮಹಿಳಾ ಅಧಿಕಾರಿಯ ಜೀವವನ್ನ ಉಳಿಸಿದ್ದಾರೆ. ಸಧ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (DRC)ನಲ್ಲಿ ಸೇತುವೆಯನ್ನು ಉದ್ಘಾಟಿಸಲು ಕೆಲವು ಅಧಿಕಾರಿಗಳು ಬಂದಿದ್ದರು. ಮಹಿಳಾ ಅಧಿಕಾರಿ ಕೆಂಪು ರಿಬ್ಬನ್ ಕತ್ತರಿಸಲು ಕತ್ತರಿಯನ್ನು ಹೊರತೆಗೆದ ತಕ್ಷಣ, ಸೇತುವೆ ಕುಸಿದಿದೆ. ಅಪಘಾತದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಬಗ್ಗೆ ಹಲವು ಬಳಕೆದಾರರು ಕಳವಳ ವ್ಯಕ್ತ ಪಡಿಸಿದ್ರೆ, ಮತ್ತೆ ಹಲವರು ನಿರ್ಮಾಣದ ಗುಣಮಟ್ಟವನ್ನ ಗೇಲಿ ಮಾಡುತ್ತಿದ್ದಾರೆ.
ಜನರ ಚಲನೆಯನ್ನ ಸರಾಗಗೊಳಿಸಲು ಸೇತುವೆ ನಿರ್ಮಾಣ
ಸ್ಥಳೀಯ ಖಾಮಾ ಪ್ರೆಸ್ ಸುದ್ದಿ ಸಂಸ್ಥೆಯ ಪ್ರಕಾರ, ಮಳೆಗಾಲದಲ್ಲಿ ನದಿಯನ್ನ ದಾಟಲು ಸ್ಥಳೀಯರಿಗೆ ಸಹಾಯ ಮಾಡಲು ಈ ಸಣ್ಣ ಸೇತುವೆಯನ್ನ ನಿರ್ಮಿಸಲಾಗಿದೆ. ಈ ಸೇತುವೆಯನ್ನ ಉದ್ಘಾಟಿಸಲು ಪುರುಷ ಅಧಿಕಾರಿ ಸೇರಿದಂತೆ ಒಬ್ಬ ಮಹಿಳೆಯೂ ಬಂದಿದ್ದರು. ಉದ್ಘಾಟನೆಯ ಸಮಯದಲ್ಲಿ ಸೇತುವೆ ಕುಸಿದಿದೆ.
ವೈರಲ್ ವಿಡಿಯೋ ಇಲ್ಲಿದೆ.!
Bridge collapses while being commissioned in DR Congo. pic.twitter.com/hIzwKWBx9g
— Africa Facts Zone (@AfricaFactsZone) September 5, 2022