ಕೆಎನ್ ಎನ್ ನ್ಯೂಸ್ ಡೆಸ್ಕ್ : ಪ್ರತಿಯೊಬ್ಬರಿಗು ಊಟದ ಜೊತೆ ಉಪ್ಪಿನಕಾಯಿ ಇಲ್ಲದ ಅಂದರೆ ಊಟ ಸೇರೋದೆ ಇಲ್ಲ. ಒಂದು ವೇಳೆ ಅಡುಗೆ ರುಚಿಯಿಲ್ಲದಿದ್ದರೂ ಅದರೊಂದಿಗೆ ಉಪ್ಪಿನಕಾಯಿ ಇದ್ದರೆ ರುಚಿ ಹೆಚ್ಚಾಗುತ್ತದೆ.
BIGG NEWS: ಸಚಿವ ಉಮೇಶ್ ಕತ್ತಿ ಅವರ ಆತ್ಮಕ್ಕೆ ತಾಯಿ ಚಾಮುಂಡೇಶ್ವರಿ ಶಾಂತಿ ಕೊಡಲಿ;ಸಂಸದ ಪ್ರತಾಪ್ ಸಿಂಹ
ಉಪ್ಪಿನಕಾಯಿ ನೆನಪಿಸಿಕೊಂಡರೆ ಬಾಯಿಯಲ್ಲಿ ನೀರು ಬರುತ್ತದೆ. ಉಪ್ಪಿನಕಾಯಿ ರುಚಿ ಅಷ್ಟರ ಮಟ್ಟಿಗೆ ಎಲ್ಲರಿಗೂ ಇಷ್ಟ. ಆದರೆ ಮನೆಯಲ್ಲಿ ಇದೆ ಎಂದು ಬೇಕಾಬಿಟ್ಟಿ ಉಪ್ಪಿನಕಾಯಿ ಸೇವಿಸಿದರೆ ನಿಮಗೆ ಅನಾರೋಗ್ಯ ಖಂಡಿತ.
ಕೆಲವರಿಗೆ ಬಿಸಿ ಅನ್ನೊಂದಿಗೆ ತುಪ್ಪ, ಉಪ್ಪಿನಕಾಯಿ ರಸವನ್ನು ಮಿಕ್ಸ್ ಮಾಡಿ ತಿನ್ನುವುದನ್ನ ನಾವು ನೋಡಿದ್ದೇವೆ. ಇನ್ನೂ ಕೆಲವರಿಗೆ ಊಟದ ಜೊತೆ ಮಾತ್ರವಲ್ಲ ಒಂದು ಪ್ಲೇಟ್ಗೆ ಉಪ್ಪಿನಕಾಯಿ ಹಾಕಿಕೊಂಡು ಆಗ್ಗಾಗ್ಗೆ ಚಪ್ಪರಿಸುವ ಅಭ್ಯಾಸ. ಆದರೆ ಬಾಯಿರುಚಿಗೆ ನೀವು ಹೀಗೆ ಉಪ್ಪಿನಕಾಯಿ ತಿಂದರೆ ಅನಾರೋಗ್ಯವನ್ನು ಮೈ ಮೇಲೆ ಎಳೆದುಕೊಂಡಂತಾಗುತ್ತದೆ.ಇದರಿಂದ ಸಮಸ್ಯೆಗಳೆನು ಏನು ಗೊತ್ತಾ?
BIGG NEWS: ಸಚಿವ ಉಮೇಶ್ ಕತ್ತಿ ಅವರ ಆತ್ಮಕ್ಕೆ ತಾಯಿ ಚಾಮುಂಡೇಶ್ವರಿ ಶಾಂತಿ ಕೊಡಲಿ;ಸಂಸದ ಪ್ರತಾಪ್ ಸಿಂಹ
ಬಿಪಿ ಇರುವವರು ತಿನ್ನಬಾರದು
ಉಪ್ಪಿನಕಾಯಿಯಲ್ಲಿ ಉಪ್ಪಿನ ಅಂಶ ಜಾಸ್ತಿ ಇರುತ್ತದೆ ಹೀಗಾಗಿ ಬಿಪಿ ಇರುವವರು ಉಪ್ಪಿನಕಾಯನ್ನು ಹೆಚ್ಚು ತಿನ್ನಬಾರದು ರಕ್ತದೊತ್ತಡ ಹೆಚ್ಚಾದರೆ ಅದು ಪ್ರಾಣಕ್ಕೆ ಕುತ್ತು ಬರುತ್ತದೆ.
ಅಲ್ಸರ್ ಬರುವ ಸಾಧ್ಯತೆ ಇದೆ
ಉಪ್ಪಿನಕಾಯಿಯಲ್ಲಿ ಉಪ್ಪು, ಖಾರದ ಜೊತೆಗೆ ಇತರ ಪ್ರಿಸರ್ವೇಟಿವ್ಗಳನ್ನು ಬಳಸಲಾಗುತ್ತದೆ. ಇದು ಆರೋಗ್ಯಕ್ಕೆ ಬಹಳ ಹಾನಿಕಾರಕ, ಮುಂದಿನ ದಿನಗಳಲ್ಲಿ ಹೊಟ್ಟೆ ಹುಣ್ಣು ಬರುವ ಸಾಧ್ಯತೆ ಹೆಚ್ಚು. ಆದ್ದರಿಂದ ಉಪ್ಪಿನಕಾಯಿ ಹೆಚ್ಚಾಗಿ ತಿನ್ನಬಾರದು.
ಹೃದಯ ಕಾಯಿಲೆ ಸಾಧ್ಯತೆ
ಉಪ್ಪಿನಕಾಯಿಯಲ್ಲಿ ಹೆಚ್ಚಿನ ಮಸಾಲೆ ಪದಾರ್ಥ ಹಾಗೂ ಹೆಚ್ಚಿನ ಎಣ್ಣೆಯನ್ನು ಬಳಸಲಾಗುತ್ತದೆ. ಎಣ್ಣೆ ಸೇವನೆ ಹಾಗೂ ಮಸಾಲೆ ಪದಾರ್ಥಗಳಿಂದ ಪೈಲ್ಸ್ ಬರುವ ಸಾಧ್ಯತೆ ಇದೆ. ಜೊತೆಗೆ ಕೊಲೆಸ್ಟ್ರಾಲ್ನಂತ ಸಮಸ್ಯೆ, ಹೃದಯಸಂಬಂಧಿ ಕಾಯಿಲೆ ಬರುವ ಸಾಧ್ಯತೆ ಹೆಚ್ಚು.