ಕಠ್ಮಂಡು (ನೇಪಾಳ): ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಪ್ರಕರಣದಲ್ಲಿ ರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕ ಸಂದೀಪ್ ಲಮಿಚಾನೆ(Sandeep Lamichhane) ವಿರುದ್ಧ ನೇಪಾಳ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ತನ್ನ ಮೇಲೆ ಎರಡು ಬಾರಿ ಅತ್ಯಾಚಾರ ಎಸಗಲಾಗಿದೆ ಎಂದು 17 ವರ್ಷದ ಬಾಲಕಿಯೊಬ್ಬಳು ಗೌಶಾಲಾ ಮೆಟ್ರೋಪಾಲಿಟನ್ ಪೊಲೀಸ್ ಸರ್ಕಲ್ನಲ್ಲಿ ಲಾಮಿಚಾನೆ ವಿರುದ್ಧ ದೂರು ದಾಖಲಿಸಿದ ನಂತರ ವಿಷಯ ಬೆಳಕಿಗೆ ಬಂದಿದೆ.
Nepal Police starts investigation over alleged rape complaint against Nepali national Cricket team Captain Sandeep Lamichhane, after a minor aged 17 lodged the case, stated Nepal Police in a statement
(Photo courtesy: Sandeep Lamichhane’s Twitter handle) pic.twitter.com/3HK386a6n5
— ANI (@ANI) September 7, 2022
ಈ ಸಂಬಂಧ ನಗರದ ಗೌಶಾಲಾ ಪೊಲೀಸ್ ವೃತ್ತದಲ್ಲಿ ಬುಧವಾರ ದೂರು ದಾಖಲಿಸಲಾಗಿದೆ ಎಂದು ಕಠ್ಮಂಡು ಜಿಲ್ಲಾ ಪೊಲೀಸ್ ಶ್ರೇಣಿಯ ಮುಖ್ಯಸ್ಥ ಭರತ್ ಬಹದ್ದೂರ್ ಬೊಹೊರಾ ತಿಳಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಬಾಲಕಿ, ʻನಾನು ಕ್ರಿಕೆಟಿಗ ಸಂದೀಪ್ ಲಮಿಚಾನೆ ಅವರ ಅಭಿಮಾನಿಯಾಗಿದ್ದು, ವಾಟ್ಸಾಪ್ ಮತ್ತು ಸ್ನ್ಯಾಪ್ಚಾಟ್ ಮೂಲಕ ಅವರ ಜೊತೆ ಚಾಟ್ ಮಾತನಾಡುತ್ತಿದ್ದೆ. ಅವರನ್ನು ಆಗಾಗ್ಗೆ ಭೇಟಿಯಾಗುತ್ತಿದ್ದೆ. ಅವರು ನಮ್ಮ ಮೊದಲ ಬೇಟಿಯಲ್ಲೇ ಪ್ರಪೋಸ್ ಮಾಡಿದ್ದರು. ಆಗಸ್ಟ್ 21 ರಂದು ಕಠ್ಮಂಡುವಿನ ಖಾಸಗಿ ಹೊಟೇಲ್ ಒಂದರಲ್ಲಿ ಭೇಟಿಯಾದಾಗ ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಕಳೆದ ವರ್ಷ ಲೆಗ್ ಸ್ಪಿನ್ನರ್ ಲಮಿಚಾನೆ ನೇಪಾಳ ಕ್ರಿಕೆಟ್ ತಂಡದ ನಾಯಕರಾಗಿ ನೇಮಕಗೊಂಡಿದ್ದರು.
BREAKING NEWS : ಸ್ವಗ್ರಾಮಕ್ಕೆ ಕತ್ತಿ ಪಾರ್ಥೀವ ಶರೀರ ಏರ್ ಲಿಫ್ಟ್ : ಬೆಲ್ಲದ ಬಾಗೇವಾಡಿಯಲ್ಲಿ ಅಂತಿಮ ಸಂಸ್ಕಾರ
ಚಿಲಿ ದೇಶದ ಅಧ್ಯಕ್ಷರ ಭಾಷಣದ ವೇಳೆ ಸೂಪರ್ ಮ್ಯಾನ್ ವೇಷ ಧರಿಸಿ ಬಾಲಕನ ಚೇಷ್ಟೆ… Video Viral
Good News : ಅತಿಥಿ ಉಪನ್ಯಾಸಕರಿಗೆ ಗುಡ್ ನ್ಯೂಸ್ : ಗೌರವಧನ ಪಾವತಿಸಲು ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆ