ಬೆಂಗಳೂರು : ತಮ್ಮ ರಾಜಕೀಯ ಹಸಿವಿಗಾಗಿ ಭಾರತವನ್ನೇ ಇಭ್ಭಾಗ ಮಾಡಿದ ಕಾಂಗ್ರೆಸ್ ಇಂದು ಭಾರತವನ್ನು ಜೋಡಿಸುವ ಯಾತ್ರೆ ಮಾಡುತ್ತಿದೆ ಎಂದು ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆಗೆ ಬಿಜೆಪಿ ಕಿಡಿಕಾರಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ತಮ್ಮ ರಾಜಕೀಯ ಹಸಿವಿಗಾಗಿ ಭಾರತವನ್ನೇ ಇಭ್ಭಾಗ ಮಾಡಿದ ಕಾಂಗ್ರೆಸ್ ಇಂದು ಭಾರತವನ್ನು ಜೋಡಿಸುವ ಯಾತ್ರೆ ಮಾಡುತ್ತಿದೆ. ಕಾಂಗ್ರೆಸ್ಸಿಗರೇ, ಮೊದಲು ಹರಿದು ಹಂಚಿಹೋಗುತ್ತಿರುವ ಕಾಂಗ್ರೆಸ್ ಪಕ್ಷವನ್ನು ಜೋಡಿಸಿಕೊಳ್ಳಿ ಎಂದು ಲೇವಡಿ ಮಾಡಿದೆ.
ತಮ್ಮ ರಾಜಕೀಯ ಹಸಿವಿಗಾಗಿ ಭಾರತವನ್ನೇ ಇಭ್ಭಾಗ ಮಾಡಿದ ಕಾಂಗ್ರೆಸ್ ಇಂದು ಭಾರತವನ್ನು ಜೋಡಿಸುವ ಯಾತ್ರೆ ಮಾಡುತ್ತಿದೆ.
ಕಾಂಗ್ರೆಸ್ಸಿಗರೇ, ಮೊದಲು ಹರಿದು ಹಂಚಿಹೋಗುತ್ತಿರುವ ಕಾಂಗ್ರೆಸ್ ಪಕ್ಷವನ್ನು ಜೋಡಿಸಿಕೊಳ್ಳಿ.#CongressChodoYatra
— BJP Karnataka (@BJP4Karnataka) September 7, 2022
ಅಖಂಡವಾಗಿದ್ದ ಭಾರತವನ್ನು ತುಂಡು ಮಾಡಿದ್ದು ಕಾಂಗ್ರೆಸ್. ಅದೇ ಕಾಂಗ್ರೆಸ್ ಈಗ ಭಾರತ್ ಜೋಡೋ ಎಂಬ ಬೃಹನ್ನಾಟಕ ಮಾಡುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ನಿಜಕ್ಕೂ ಭಾರತವನ್ನು ಜೋಡಿಸುವ ಆಸೆಯಿದ್ದರೆ, ಪಾಕಿಸ್ಥಾನದಿಂದ ಭಾರತ್ ಜೋಡೋ ಯಾತ್ರೆ ಆರಂಭಿಸಲಿ ಎಂದು ಟೀಕಿಸಿದೆ.
ಅಖಂಡವಾಗಿದ್ದ ಭಾರತವನ್ನು ತುಂಡು ಮಾಡಿದ್ದು ಕಾಂಗ್ರೆಸ್.
ಅದೇ ಕಾಂಗ್ರೆಸ್ ಈಗ ಭಾರತ್ ಜೋಡೋ ಎಂಬ ಬೃಹನ್ನಾಟಕ ಮಾಡುತ್ತಿದೆ.
ಕಾಂಗ್ರೆಸ್ ಪಕ್ಷಕ್ಕೆ ನಿಜಕ್ಕೂ ಭಾರತವನ್ನು ಜೋಡಿಸುವ ಆಸೆಯಿದ್ದರೆ, ಪಾಕಿಸ್ಥಾನದಿಂದ ಭಾರತ್ ಜೋಡೋ ಯಾತ್ರೆ ಆರಂಭಿಸಲಿ.#CongressChodoYatra
— BJP Karnataka (@BJP4Karnataka) September 7, 2022