ಶ್ರೀನಗರ: ಮಂಗಳವಾರ ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪೋಷ್ಕ್ರೀರಿ ಪ್ರದೇಶದಲ್ಲಿ ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ.
ಅನಂತ್ನಾಗ್ನ ಪೋಷ್ಕ್ರೀರಿ ಗ್ರಾಮದಲ್ಲಿ ಭಯೋತ್ಪಾದಕರು ಅಡಗಿರುವ ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ಪೊಲೀಸರು ಮತ್ತು ಸೇನೆಯಿಂದ ಜಂಟಿ ಶೋಧ ಕಾರ್ಯಾಚರಣೆ ಪ್ರಾರಂಭಿಸಲಾಯಿತು. ಈ ವೇಳೆ ನಡೆದ ಎನ್ಕೌಂಟರ್ನಲ್ಲಿ ಇಬ್ಬರು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಉಗ್ರರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Encounter underway at the Poshkreeri area of Anantnag. Two terrorists killed. Police and security forces are on the job: Jammu and Kashmir Police
(Visuals deferred by unspecified time) pic.twitter.com/UxWDXPOdlj
— ANI (@ANI) September 6, 2022
ಹತರಾದವರನ್ನು ಜಬ್ಲಿಪೋರಾ ಬಿಜ್ಬೆಹರಾ ನಿವಾಸಿ ಡ್ಯಾನಿಶ್ ಅಹ್ಮದ್ ಭಟ್ ಅಲಿಯಾಸ್ ಕೊಕಬ್ ದುರೀ ಮತ್ತು ಫತೇಪೋರಾ ಅನಂತನಾಗ್ ನಿವಾಸಿ ಬಶರತ್ ನಬಿ ಲೋನ್ ಎಂದು ಗುರುತಿಸಲಾಗಿದೆ.
BIGG NEWS: ಬೆಂಗಳೂರಿನಲ್ಲಿ ಪ್ರವಾಹದ ನಡುವೆಯೂ ಟೆಂಪ್ಟ್ ಆಗಿ ದೋಸೆ ತಿನ್ನಲು ಹೋದ ಸಂಸದ ತೇಜಸ್ವಿ ಸೂರ್ಯಗೆ ತರಾಟೆ
BREAKING NEWS : ಸಚಿವ ಉಮೇಶ್ ಕತ್ತಿ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ