ಬೆಂಗಳೂರು: ಬೆಂಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಇಲ್ಲಿನ ಜನ ಬೇಸತ್ತು ಹೋಗಿದ್ದಾರೆ. ಜಲಾವೃತಗೊಂಡ ಪ್ರದೇಶಗಳಿಂದ ಜನರನ್ನು ಬೇರೆಡೆಗೆ ಶಿಫ್ಟ್ ಮಾಡಲಾಗುತ್ತಿದೆ. ಈ ನಡುವೆ ʻಅನಾಕಾಡೆಮಿ ಸಿಇಒ ಗೌರವ್ ಮುಂಜಾಲ್ʼ ಕುಟುಂಬವನ್ನು ಕೂಡಾ ಟ್ರಾಕ್ಟರ್ ಮೂಲಕ ಸ್ಥಳಾಂತರ ಮಾಡಲಾಗಿದೆ. ಈ ವಿಡಿಯೋವನ್ನು ಗೌರವ್ ಮುಂಜಾಲ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಗೌರವ್ ಮುಂಜಾಲ್ ವಾಸವಿರುವ ಪ್ರದೇಶವು ಜಲಾವೃತಗೊಂಡಿರುವ ಕಾರಣ ಅವರ ಕುಟುಂಬ, ಸಾಕು ಪ್ರಾಣಿಗಳ ಸಮೇತ ಟ್ರ್ಯಾಕ್ಟರ್ ಮೂಲಕ ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ.
ಟ್ರ್ಯಾಕ್ಟರ್ನಲ್ಲಿ ತನ್ನ ಮುದ್ದಿನ ಆಲ್ಬಸ್ನ ವೀಡಿಯೊವನ್ನು ಹಂಚಿಕೊಂಡ ಮುಂಜಾಲ್, “ಕುಟುಂಬ ಮತ್ತು ನನ್ನ ಸಾಕುಪ್ರಾಣಿ ಆಲ್ಬಸ್ ಅನ್ನು ಜಲಾವೃತಗೊಂಡ ಸ್ಥಳದಿಂದ ಸ್ಥಳಾಂತರಿಸಲಾಗಿದೆ. ಈಗ ಇಲ್ಲಿನ ಪರಿಸ್ಥಿತಿ ಕೆಟ್ಟದಾಗಿದೆ. ನಿಮಗೆ ಯಾವುದೇ ಸಹಾಯ ಬೇಕಾದರೂ ನನ್ನನ್ನು ಸಂಪರ್ಕಿಸಿ. ನಾನು ನನ್ನ ಕೈಲಾದಷ್ಟು ಸಹಾಯ ಮಾಡಲು ಪ್ರಯತ್ನಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.
Family and my Pet Albus has been evacuated on a Tractor from our society that’s now submerged. Things are bad. Please take care. DM me if you need any help, I’ll try my best to help. pic.twitter.com/MYnGgyvfx0
— Gaurav Munjal (@gauravmunjal) September 6, 2022
BIGG NEWS: ಭಾರತೀಯ ಮೂಲದ ʻಸುಯೆಲ್ಲಾ ಬ್ರಾವರ್ಮನ್ʼ ಯುಕೆಯ ನೂತನ ಗೃಹ ಕಾರ್ಯದರ್ಶಿಯಾಗಿ ನೇಮಕ| Suella Braverman
BIGG NEWS : ಸಚಿವ ಉಮೇಶ್ ಕತ್ತಿ ನಿಧನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಸಂತಾಪ