ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ(National Stock Exchange)ದ ಮಾಜಿ ಸಿಇಒ ಮತ್ತು ಎಂಡಿ ರವಿ ನಾರಾಯಣ್ ಅವರನ್ನು ಜಾರಿ ನಿರ್ದೇಶನಾಲಯ(ಇಡಿ) ಮಂಗಳವಾರ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊ-ಲೊಕೇಶನ್ ಹಗರಣಕ್ಕೆ ಸಂಬಂಧಿಸಿದ ಅಕ್ರಮ ‘ಫೋನ್ ಟ್ಯಾಪಿಂಗ್’ ಪ್ರಕರಣದಲ್ಲಿ ರವಿ ನಾರಾಯಣ್ ಅವರನ್ನು ಇಡಿ ನಿನ್ನೆ ಸಂಜೆ ಅರೆಸ್ಟ್ ಮಾಡಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್ಎ) ಕ್ರಿಮಿನಲ್ ಸೆಕ್ಷನ್ಗಳ ಅಡಿಯಲ್ಲಿ ಫೋನ್ ಟ್ಯಾಪಿಂಗ್ ಪ್ರಕರಣದಲ್ಲಿ ನಾರಾಯಣ್ ಅವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
Ravi Narain, former chairman of the National Stock Exchange of India (NSE) arrested, in the Co-location case: Enforcement Directorate
— ANI (@ANI) September 6, 2022
ಈ ಹಿಂದೆ ಇದೇ ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಜುಲೈ 19 ರಂದು ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಸಂಜಯ್ ಪಾಂಡೆ ಅವರನ್ನು ಅರೆಸ್ಟ್ ಮಾಡಲಾಗಿತ್ತು. ನಂತ್ರ, ಎನ್ಎಸ್ಇ ಮಾಜಿ ಎಂಡಿ ಮತ್ತು ಸಿಇಒ ಚಿತ್ರಾ ರಾಮಕೃಷ್ಣ ಅವರನ್ನು ಇಡಿ ಬಂಧಿಸಿತ್ತು.
BIGG NEWS: ಭಾರತೀಯ ಮೂಲದ ʻಸುಯೆಲ್ಲಾ ಬ್ರಾವರ್ಮನ್ʼ ಯುಕೆಯ ನೂತನ ಗೃಹ ಕಾರ್ಯದರ್ಶಿಯಾಗಿ ನೇಮಕ| Suella Braverman
BREAKING NEWS: ಮಿಜೋರಾಂನ ಚಂಫೈನಲ್ಲಿ 4.0 ತೀವ್ರತೆಯ ಭೂಕಂಪ | Earthquake in Champhai
BIGG NEWS : ಬೆಂಗಳೂರು ಸೇರಿ ರಾಜ್ಯಾದ್ಯಂತ ವರುಣಾರ್ಭಟ : ಒಂದೇ ದಿನ ಮಹಾಮಳೆಗೆ 9 ಬಲಿ