ಬೆಂಗಳೂರು: ಟಿಕೆ ಹಳ್ಳಿ ಜಲಮಂಡಳಿಗೆ ನೀರು ನುಗ್ಗಿದ್ದ ಹಿನ್ನೆಲೆಯಲ್ಲಿ ಯಂತ್ರಗಳು ಸ್ಥಗಿತಗೊಂಡಿತ್ತು. ಹೀಗಾಗಿ ಅರ್ಧ ಬೆಂಗಳೂರಿಗೆ ಕಾವೇರಿನ ನೀರಿನ ಸಮಸ್ಯೆ ಎದುರಾಗಿತ್ತು. ಇದೀಗ ಬಿಡಬ್ಲ್ಯೂಎಸ್ಎಸ್ಬಿ ಯಿಂದ ಬೆಂಗಳೂರು ಜನರಿಗೆ ಸಿಹಿ ಸುದ್ದಿ ಕೊಟ್ಟಿದೆ. ನಾಳೆಯಿಂದ ಎಂದಿನಂತೆ ಕಾವೇರಿ ನೀರು ಪೂರೈಕೆಯಾಗಲಿದೆ.
BIGG NEWS: ವಿಜಯಪುರದ ಭೀಮಾತೀರದಲ್ಲಿ ಮತ್ತೆ ರಕ್ತಪಾತ;ತಮ್ಮನಿಂದಲೇ ಅಣ್ಣನ ಬರ್ಬರ ಹತ್ಯೆ
ಬೆಳಗ್ಗೆ ಅಥವಾ ಮಧ್ಯಾಹ್ನದೊಳಗೆ ನೀರು ಪೂರೈಕೆಯಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳಲಾಗುತ್ತದೆ ಎಂದು ಬೆಂಗಳೂರು ಜಲ ಮಂಡಳಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಾಹಿತಿ ನೀಡಿದ್ದಾರೆ. ಸದ್ಯ 4TH ಸ್ಟೇಜ್ನ ಫೇಸ್ 2ರ ಪಂಪ್ ಸಿದ್ಧಗೊಳಿಸಿ ಕಾರ್ಯಾರಂಭ ಮಾಡಲಾಗಿದೆ. ಫೇಸ್ 2ರ ಪಂಪ್ ಸೆಟ್ 110 ಎಂಎಲ್ಡಿ ನೀರು ಸಾಮರ್ಥ್ಯಹೊಂದಿದೆ. ಉಳಿದ ಕಾರ್ಯ ತ್ವರಿತಗತಿಯಲ್ಲಿ ಆಗುತ್ತೆ. ಇಂದು ತಡರಾತ್ರಿಯವರೆಗೆ ದುರಸ್ತಿ ಕಾರ್ಯ ನಡೆಯಲಿದೆ.
ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಟಿಕೆ ಹಳ್ಳಿ ಜಲ ಮಂಡಳಿಗೆ ನೀರು ನುಗ್ಗಿತ್ತು . ಈ ಹಿನ್ನೆಲೆಯಲ್ಲಿ ಸೆಕ್ಟರ್ 4 ರ ನೀರು ಸರಬರಾಜು ಕೇಂದ್ರಗಳು ಮುಳುಗಡೆಯಾಗಿತ್ತು. ಸದ್ಯ ನೀರು ತಗಿಯುವಲ್ಲಿ ಸಿಬ್ಬಂದಿ ಭಾಗಶಃ ಯಶಸ್ವಿಯಾಗಿದ್ದಾರೆ. ಕಾವೇರಿ ಜಲಮಂಡಳಿಯ 4 ನೇ ಹಂತಕ್ಕೆ ಮಳೆ ನೀರು ನುಗ್ಗಿದೆ. BWSSB ಅಧಿಕಾರಿಗಳು ಈಗಾಗ್ಲೆ ಒಂದು ಯಂತ್ರವನ್ನ ಪ್ರಾಯೋಗಿಕವಾಗಿ ಚಾಲನೆ ಕೊಟ್ಟಿದ್ದಾರೆ.