ಕೆಎನ್ ಎನ್ ನ್ಯೂಸ್ ಡೆಸ್ಕ್ : ಇಂದಿನ ದಿನದಲ್ಲಿ ಪ್ರತಿಯೊಬ್ಬರು ಫಿಟ್ ನೆಸ್ ಕಡೆ ಹೆಚ್ಚು ಗಮನ ಹರಿಸುತ್ತಾರೆ. ಹಾಗಾಗಿ ದಿನನಿತ್ಯ ವಾಕ್ ಜಾಗಿಂಗ್ ಮಾಡುತ್ತಾರೆ. ಆದರೆ ವಾಕಿಂಗ್, ಜಾಗಿಂಗ್ ಮಾಡುವಾಗ ಕೂಡಾ ಕೆಲವೊಂದು ನಿಯಮಗಳನ್ನು ಅನುಸರಿಸಿದರೆ, ಫಲಿತಾಂಶ ಬೇಗನೆ ದೊರೆಯುತ್ತದೆ.
BIGG NEWS: ಧಾರವಾಡದಲ್ಲಿ ಮಳೆಯೋ ಮಳೆ…; ಪ್ರವಾಹ ರಭಸಕ್ಕೆ ಕುಸಿದ ರಸ್ತೆ
ಎಲ್ಲಾ ವ್ಯಾಯಾಮಗಳಲ್ಲಿ ರನ್ನಿಂಗ್ ಮಾಡುವುದನ್ನು ಉತ್ತಮ ಕಾರ್ಡಿಯೋ ಎಂದು ಪರಿಗಣಿಸಲಾಗುತ್ತದೆ. ನೀವು ಪ್ರತಿ ದಿನ ಇಂತಿಷ್ಟು ಸಮಯ ಓಡುವುದರಿಂದ ಸೀಮಿತ ಸಮಯದಲ್ಲಿ ಹೆಚ್ಚು ಕ್ಯಾಲೊರಿಗಳನ್ನು ಬರ್ನ್ ಮಾಡಲು ನಿಮಗೆ ಸಹಾಯ ಮಾಡುತ್ತದೆ. ಪ್ರತಿದಿನ ಸುಮಾರು 30 ನಿಮಿಷಗಳ ಕಾಲ ಮಧ್ಯಮ ವೇಗದಲ್ಲಿ ರನ್ನಿಂಗ್ ಮಾಡುವುದು ನಿಮಗೆ ಅನೇಕ ಪ್ರಯೋಜನಗಳನ್ನು ಒದಗಿಸುತ್ತದೆ.
ಇನ್ನು ವ್ಯಾಯಾಮ ಮಾಡುವಾಗ , ವಾಕಿಂಗ್ ಮಾಡುವಾಗ ಜನರು ಉಸಿರನ್ನು ಹಿಡಿದಿಟ್ಟುಕೊಳ್ಳುವ ಅಭ್ಯಾಸ ಹೊಂದಿರುತ್ತಾರೆ. ಆದರೆ ಹೀಗೆ ಮಾಡುವುದು ಅಪಾಯಕಾರಿ ಎಂದು ವೈದ್ಯರು ಹೇಳುತ್ತಾರೆ.
ಇದು ನಿಮ್ಮ ರಕ್ತದೊತ್ತಡವನ್ನು ಹೆಚ್ಚಿಸಬಹುದು, ತಲೆ ತಿರುಗುವಿಕೆ, ವಾಕರಿಕೆ ಅಥವಾ ಹೃದಯಾಘಾತವನ್ನು ಉಂಟುಮಾಡಬಹುದು.
BIGG NEWS: ಧಾರವಾಡದಲ್ಲಿ ಮಳೆಯೋ ಮಳೆ…; ಪ್ರವಾಹ ರಭಸಕ್ಕೆ ಕುಸಿದ ರಸ್ತೆ
ಸರಿಯಾಗಿ ಉಸಿರಾಡುವುದು ನಿಮ್ಮ ವ್ಯಾಯಾಮವನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತದೆ. ನಿಮ್ಮ ಹೃದಯರಕ್ತನಾಳದ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ಸ್ನಾಯುಗಳ ಬಿಗಿತವನ್ನು ಕಡಿಮೆ ಮಾಡುತ್ತದೆ. ನೀವು ಓಡುವಾಗಲೂ ಕೂಡಾ ಸರಿಯಾಗಿ ಉಸಿರಾಡಿದರೆ ವೇಗವಾಗಿ ಓಡಲು ಸಹಾಯವಾಗುತ್ತದೆ.
ನೀವು ಓಡುವಾಗ ದೇಹಕ್ಕೆ ಆಮ್ಲಜನಕದ ಅಗತ್ಯವಿರುತ್ತದೆ. ಸ್ವಲ್ಪ ಓಡಿ ಸುಸ್ತಾದಲ್ಲಿ ಹೆಚ್ಚು ಉಸಿರು ತೆಗೆದುಕೊಳ್ಳಬೇಕೆನಿಸುತ್ತದೆ. ನಾವು ವರ್ಕೌಟ್ ಮಾಡುವಾಗ ದೇಹವು ಇಂಗಾಲದ ಡೈ ಆಕ್ಸೈಡನ್ನು ಹೆಚ್ಚು ಉತ್ಪತ್ತಿ ಮಾಡುತ್ತದೆ. ಆದರೆ ಆಮ್ಲಜನಕವನ್ನು ಹೆಚ್ಚಾಗಿ ತೆಗೆದುಕೊಂಡರೆ ನಮ್ಮ ಉಸಿರಾಟದ ಪ್ರಕ್ರಿಯೆಯ ಚೆನ್ನಾಗಿರುತ್ತದೆ. ಆದ್ದರಿಂದ ಲಯಬದ್ಧವಾಗಿ ಉಸಿರಾಡಿದರೆ ನಮ್ಮ ದೇಹವು ಹೆಚ್ಚು ಆಮ್ಲಜನಕವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಓಡುವಾಗ ಮೂಗಿನಲ್ಲಿ ಉಸಿರಾಡಿ, ಬಹಳ ಅವಶ್ಯತೆ ಇದ್ದರೆ ಬಾಯಿಂದಲೂ ಉಸಿರಾಡಬಹುದು.