ನವದೆಹಲಿ : ಭಾರತ್ ಬಯೋಟೆಕ್ನ ಭಾರತದ ಮೊದಲ ಇಂಟ್ರಾನಾಸಲ್ ಕೋವಿಡ್ ಲಸಿಕೆಗೆ ಡಿಸಿಜಿಐ ಅನುಮೋದನೆ ನೀಡಿದೆ.
Bharat Biotech gets emergency use authorisation from DCGI for intranasal #COVID19 vaccine: Union Health Minister Dr Mansukh Mandaviya
This will be India's first nasal vaccine for COVID pic.twitter.com/LZDoVwa5bI
— ANI (@ANI) September 6, 2022
ಇನ್ನು ಭಾರತ್ ಬಯೋಟೆಕ್ನ ಮೂಗಿನ ಕೋವಿಡ್ ಲಸಿಕೆಗೆ ಸಿಡಿಎಸ್ಸಿಒ ಅನುಮೋದನೆ ದೊರೆತ ನಂತರ, ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವಿಯಾ ಇದನ್ನ ‘ಕೋವಿಡ್ -19 ವಿರುದ್ಧದ ಭಾರತದ ಹೋರಾಟಕ್ಕೆ ದೊಡ್ಡ ಉತ್ತೇಜನ’ ಎಂದು ಕರೆದಿದ್ದಾರೆ.
ಭಾರತ್ ಬಯೋಟೆಕ್ನ SARS-CoV-S ಕೋವಿಡ್-19 (ಚಿಂಪಾಂಜಿ ಅಡೆನೊವೈರಸ್ ವೆಕ್ಟರ್ಡ್) ಮರುಸಂಯೋಜಿತ ಮೂಗಿನ ಲಸಿಕೆಯನ್ನ ತುರ್ತು ಪರಿಸ್ಥಿತಿಯಲ್ಲಿ ನಿರ್ಬಂಧಿತ ಬಳಕೆಗಾಗಿ 18+ ವಯೋಮಾನದವರಲ್ಲಿ ಕೋವಿಡ್ -19 ವಿರುದ್ಧ ಪ್ರಾಥಮಿಕ ರೋಗನಿರೋಧಕತೆಗಾಗಿ ಸಿಡಿಎಸ್ಸಿಒ ಅನುಮೋದಿಸಿದೆ.