ಬೆಂಗಳೂರು: ನಗರದಲ್ಲಿ ಕಳೆದೆರೆಡು ದಿನಗಳಲ್ಲಿ ಮಳೆಯ ಅವಾಂತರ ಸೃಷ್ಟಿಯಾಗಿದೆ. ಈ ಬಗ್ಗೆ ಸಂಸದ ಡಿಕೆ ಸುರೇಶ್ ಪ್ರತಿಕ್ರಿಯೆ ನೀಡಿದ, ಸ್ವಚ್ಛ ಭಾರತ್ ಬೆಂಗಳೂರು ಎಲ್ಲಿಗೆ ಹೋಗಿದೆ? ಬೀದಿಯಲ್ಲಿ ಕಸ ಬಿದ್ದು ಕೊಳೆಯುತ್ತಿದೆ ಎಂದು ಕಿಡಿಕಾರಿದ್ದಾರೆ.
BIGG BREAKING NEWS: ಬಿಜೆಪಿಗೆ ಒಲಿದ ಮೈಸೂರು ಮಹಾನಗರ ಪಾಲಿಕೆಯ ಪಟ್ಟ
ನಗರದಲ್ಲಿ ಮಾತನಾಡಿದ ಅವರು, ಮಾಧ್ಯಮಗಳು ಯಾಕೆ ಇದರ ಬಗ್ಗೆ ಹೇಳುತ್ತಿಲ್ಲ? ನಾವಿದ್ದಾಗ ವೀಡಿಯೋ ತೆಗೆದು ವರದಿ ಮಾಡಲಾಗುತ್ತಿತ್ತು. ನಮ್ಮ ಉಸ್ತುವಾರಿ ಸಚಿವರನ್ನು ಪ್ರಶ್ನೆ ಮಾಡುತ್ತಿದ್ದರು. ಇವತ್ತು ಬೆಂಗಳೂರು ಮುಳುಗಿಹೋಗಿದೆ. ಯಾಕೆ ಯಾರೂ ಪ್ರಶ್ನೆ ಮಾಡುತ್ತಿಲ್ಲ ಎಂದು ಕೇಳಿದರು.
ಮಂಡೂರು ಕಸವನ್ನು ದಿನ ತೋರಿಸಲಾಗುತ್ತಿತ್ತು. ಆಗ ನಾವು ಆರು ತಿಂಗಳಲ್ಲಿ ಬಂದ್ ಮಾಡಿದ್ದೇವೆ. ಇವತ್ತು ಕಸದಲ್ಲೂ ಕಮಿಷನ್ ಎತ್ತಿತ್ತಿದ್ದಾರೆ. ರೋಡ್,ಗುಂಡಿ ಮುಚ್ಚುವುದರಲ್ಲೂ ಕಮಿಷನ್. ಸತ್ತ ಹೆಣ ಹೂಳಲು ಕಮೀಷನ್ ಪಡೆಯುತ್ತಿದ್ದೀರಿ. ಇಂತಹ ಭ್ರಷ್ಟ ವ್ಯವಸ್ಥೆ ಸರ್ಕಾರ ನಾವು ನೋಡಿಲ್ಲ ವಾಗ್ದಾಳಿ ನಡೆಸಿದ್ದಾರೆ.