ಸುಳ್ಯ: ತಾಲೂಕಿನ ವಿವಿಧ ಭಾಗಗಳಲ್ಲಿ ಭಾರಿ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಳ್ಯದ ಬೊಳುಬೈಲಿನಲ್ಲಿ ರಸ್ತೆ ಪೂರ್ತಿ ನೀರು ತುಂಬಿದ್ದು, ಹೊಳೆಯಾಗಿ ಮಾರ್ಪಾಡಾದ ಪರಿಣಾಮ ವಾಹನ ಸವಾರರು ಸಂಕಷ್ಟ ಎದುರಾಗಿದೆ.
BIGG NEWS: ಮೈಸೂರಿನಲ್ಲಿ ಮೇಯರ್, ಉಪಮೇಯರ್ ಚುನಾವಣೆ; ಕಾಂಗ್ರೆಸ್ ನಿಂದ ಹೊಸ ರಣತಂತ್ರ
ಹೆದ್ದಾರಿಯಲ್ಲಿ ವಾಹನ ದಾಟಲು ಆಗದೆ ನೀರು ರಸ್ತೆಯಲ್ಲಿ ಕಿಲೋ ಮೀಟರ್ ಗಟ್ಟಲೆ ಫುಲ್ ಟಾಫ್ರಿಕ್ ಜಾಮ್ ಆಗಿದೆ.
ಬೊಳುಬೈಲಿನಲ್ಲಿ ಚರಂಡಿ ವ್ಯವಸ್ಥೆ ಸರಿಯಾಗಿಲ್ಲದ ಕಾರಣ ವಿವಿಧ ಕಡೆಗಳಿಂದ ಹರಿದು ಬಂದ ನೀರು ರಸ್ತೆಯಲ್ಲಿಯೇ ಶೇಖರಣೆಯಾಗಿ ಹೊಳೆಯಂತೆ ಹರಿಯುತ್ತಿದೆ. ತೋಟಗಳಿಗೆ ಪ್ರವಾಹ ಸಿಲುಕಿದ್ದು, ಜಲಾವೃತವಾಗಿದೆ. ಸುಳ್ಯ- ಬೆಳ್ಳಾರೆ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತಡೆ ಉಂಟಾಯಿತು.