ನವದೆಹಲಿ : ದೆಹಲಿಯ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಮನಿ ಲಾಂಡರಿಂಗ್ ಪ್ರಕರಣವನ್ನು ದಾಖಲಿಸಿದೆ. ದೆಹಲಿ ಸೇರಿದಂತೆ ಸುಮಾರು 30 ಸ್ಥಳಗಳಲ್ಲಿ ಇಡಿ ದಾಳಿ ನಡೆಸಿದೆ.
BIGG NEWS: ಬೆಂಗಳೂರಿನ ಜನರೇ ಎಚ್ಚರ… ! ಇನ್ನೂ ಎರಡು ದಿನ ಭಾರಿ ಮಳೆ ; ಯೆಲ್ಲೋ ಅಲರ್ಟ್ ಘೋಷಣೆ
ರಾಜಧಾನಿ ದೆಹಲಿಯನ್ನು ಹೊರತುಪಡಿಸಿ,ಯುಪಿಯ ರಾಜಧಾನಿ ಲಕ್ನೋ, ಹರಿಯಾಣದ ಗುರುಗ್ರಾಮ್, ಚಂಡೀಗಢ, ಮುಂಬೈ, ಹೈದರಾಬಾದ್ ಮತ್ತು ಬೆಂಗಳೂರು ಸೇರಿದಂತೆ 30 ಸ್ಥಳಗಳಲ್ಲಿ ಇಡಿ ದಾಳಿಗಳು ನಡೆಯುತ್ತಿವೆ ಎಂದು ಇ.ಡಿ ಮೂಲಗಳು ತಿಳಿಸಿವೆ.
ಅಬಕಾರಿ ನೀತಿಯಲ್ಲಿನ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಎಎಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಇಡಿಯ ಸುಮಾರು 150 ಅಧಿಕಾರಿಗಳು 30 ಸ್ಥಳಗಳ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಮೆಸರ್ಸ್ ಇಂಡೋ ಸ್ಪಿರಿಟ್ಸ್ನ ಎಂಡಿಯಾಗಿರುವ ಈ ಪ್ರಕರಣದ ಆರೋಪಿ ಸಮೀರ್ ಮಹೆಂದ್ರು ಅವರ ನಿವಾಸಗಳ ಮೇಲೂ ಇಡಿ ದಾಳಿ ನಡೆಸಿದೆ.