ಕೆಎನ್ಎನ್ಡಿಜಿಟಲ್ ಡೆಸ್ಕ್ : ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಸಣ್ಣ ಮತ್ತು ಮಧ್ಯಮ ರೈತರಿಗೆ ಪ್ರತಿ ವರ್ಷ 6,000 ರೂ.ಗಳನ್ನ ಆರ್ಥಿಕ ಸಹಾಯವಾಗಿ ನೀಡಲಾಗುತ್ತದೆ. ವರ್ಷದ ಮೊದಲ ಕಂತನ್ನು ಏಪ್ರಿಲ್ 1 ಮತ್ತು ಜುಲೈ 31ರ ನಡುವೆ ವರ್ಗಾಯಿಸಲಾಗುತ್ತದೆ. ಎರಡನೇ ಕಂತನ್ನ ಆಗಸ್ಟ್ 1 ರಿಂದ ನವೆಂಬರ್ 30ರ ನಡುವೆ ವರ್ಗಾಯಿಸಲಾಗುತ್ತದೆ. ಮೂರನೇ ಕಂತನ್ನ ಡಿಸೆಂಬರ್ 1ರಿಂದ ಮಾರ್ಚ್ 31ರ ನಡುವೆ ವರ್ಗಾಯಿಸಲಾಗುತ್ತದೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 2000-2000 ರೂಪಾಯಿಗಳನ್ನ ವರ್ಷಕ್ಕೆ ಮೂರು ಬಾರಿ ನೀಡಲಾಗುತ್ತದೆ. ಅದ್ರಂತೆ, ಇದಕ್ಕೂ ಮುನ್ನ ಕಳೆದ ಬಾರಿ ಮೇ 31ರಂದು ಕೇಂದ್ರ ಸರ್ಕಾರದ ರೈತರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಿತ್ತು. ಈ ಬಾರಿ ಸೆಪ್ಟೆಂಬರ್ ಮತ್ತು ನವೆಂಬರ್ ನಡುವೆ ರೈತರ ಖಾತೆಗೆ ಹಣ ವರ್ಗಾವಣೆಯಾಗುವ ನಿರೀಕ್ಷೆ ಇದೆ.
BIGG NEWS: ದಾವಣಗೆರೆಯಲ್ಲಿ ಮಳೆ ಅಬ್ಬರಕ್ಕೆ ತತ್ತರಿಸಿದ ಜನ; ಮುಸ್ಟೂರಿನಲ್ಲಿ ಮನೆ ಕುಸಿತದಿಂದ ವೃದ್ಧ ದಂಪತಿಗೆ ಗಾಯ
ಈಗ ಸರ್ಕಾರವು ಇ-ಕೆವೈಸಿಯನ್ನ ಕಡ್ಡಾಯಗೊಳಿಸಿದೆ. ಇದಕ್ಕಾಗಿ ಆಗಸ್ಟ್ 31ರವರೆಗೆ ಗಡುವು ನೀಡಲಾಗಿತ್ತು. ಈಗ ಈ ಗಡುವು ಮುಗಿದಿದೆ. ಸರ್ಕಾರದ ಪ್ರಕಾರ, ಈಗ 4 ತಿಂಗಳ ನಂತರ, ಇ-ಕೆವೈಸಿ ಮಾಡಿದ ರೈತರ ಖಾತೆಗೆ 2000 ರೂಪಾಯಿ ಸೇರುವುದಿಲ್ಲ. ಇನ್ನು eKYC ಗಡುವಿನ ವಿಸ್ತರಣೆಯ ಕುರಿತು ಪ್ರಸ್ತುತ ಯಾವುದೇ ಹೊಸ ಅಪ್ಡೇಟ್ ಇಲ್ಲ.
BIGG NEWS: ಚಿಕ್ಕಬಳ್ಳಾಪುರದಲ್ಲಿ ನಿಲ್ಲದ ಮಳೆಯ ಅವಾಂತರ: ನಂದಿಬೆಟ್ಟದ ಎರಡು ಕಡೆ ಗುಡ್ಡ ಕುಸಿತ; ಆತಂಕದಲ್ಲಿ ಜನರು
ಇವರಿಗೆ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಪ್ರಯೋಜನವು ಲಭ್ಯವಿರುವುದಿಲ್ಲ.!
* ಒಬ್ಬ ರೈತ ವ್ಯವಸಾಯ ಮಾಡುತ್ತಿದ್ದು, ಹೊಲವು ಅವನ ಹೆಸರಿನಲ್ಲಿರದೆ ಆತನ ತಂದೆ ಅಥವಾ ಅಜ್ಜನ ಹೆಸರಿನಲ್ಲಿದ್ದರೆ, ಆತನಿಗೆ ವಾರ್ಷಿಕ 6,000 ರೂಪಾಯಿ ಸಿಗುವುದಿಲ್ಲ. ಆ ಜಮೀನು ರೈತರ ಹೆಸರಲ್ಲಿರಬೇಕು.
* ಒಬ್ಬ ರೈತ ಬೇರೊಬ್ಬ ರೈತನಿಂದ ಜಮೀನು ಪಡೆದು ಬಾಡಿಗೆಗೆ ಕೃಷಿ ಮಾಡಿದ್ರೆ ಅವನಿಗೂ ಈ ಯೋಜನೆಯ ಲಾಭ ಸಿಗುವುದಿಲ್ಲ.
* ಯಾವುದೇ ಸಾಂಸ್ಥಿಕ ಭೂಮಿ ಹೊಂದಿರುವವರು ಈ ಯೋಜನೆಯ ಲಾಭವನ್ನು ಪಡೆಯುವಂತಿಲ್ಲ.
* ಒಬ್ಬ ರೈತ ಅಥವಾ ಕುಟುಂಬದ ಯಾರಾದರೂ ಸಾಂವಿಧಾನಿಕ ಹುದ್ದೆಯಲ್ಲಿದ್ದರೆ, ಅವರಿಗೆ ಪ್ರಯೋಜನವಾಗುವುದಿಲ್ಲ.
* ರಾಜ್ಯ/ಕೇಂದ್ರ ಸರ್ಕಾರ ಹಾಗೂ ಪಿಎಸ್ಯುಗಳು ಮತ್ತು ಸರ್ಕಾರಿ ಸ್ವಾಯತ್ತ ಸಂಸ್ಥೆಗಳ ಸೇವೆಯಲ್ಲಿರುವ ಅಥವಾ ನಿವೃತ್ತ ಅಧಿಕಾರಿಗಳು ಮತ್ತು ಉದ್ಯೋಗಿಗಳು ಯೋಜನೆಯ ಪ್ರಯೋಜನದ ಅಡಿಯಲ್ಲಿ ಒಳಗೊಳ್ಳುವುದಿಲ್ಲ.
* ವೈದ್ಯರು, ಎಂಜಿನಿಯರ್ಗಳು, ಸಿಎಗಳು, ಆರ್ಕಿಟೆಕ್ಟ್ಗಳು ಮತ್ತು ವಕೀಲರಂತಹ ವೃತ್ತಿಪರರು ಕೃಷಿ ಮಾಡಿದರೂ ಯೋಜನೆಯ ಪ್ರಯೋಜನವನ್ನು ಪಡೆಯುವುದಿಲ್ಲ.
* 10,000 ರೂ.ಗಿಂತ ಹೆಚ್ಚು ಮಾಸಿಕ ಪಿಂಚಣಿ ಪಡೆಯುವ ನಿವೃತ್ತ ಪಿಂಚಣಿದಾರರಿಗೆ ಈ ಪ್ರಯೋಜನ ಸಿಗುವುದಿಲ್ಲ.
* ಕಳೆದ ಮೌಲ್ಯಮಾಪನ ವರ್ಷದಲ್ಲಿ ಆದಾಯ ತೆರಿಗೆ ಪಾವತಿಸಿದ ವೃತ್ತಿಪರರನ್ನ ಸಹ ಯೋಜನೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ.
* ರೈತ ಕುಟುಂಬದ ಯಾವುದೇ ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯಿತಿಯಲ್ಲಿದ್ದರೂ ಅದರ ವ್ಯಾಪ್ತಿಯಿಂದ ಹೊರಗುಳಿಯುತ್ತದೆ.
BIGG NEWS : KPTCL’ ಪರೀಕ್ಷೆ ಅಕ್ರಮ ಪ್ರಕರಣ : ಮತ್ತೆ ಮೂವರನ್ನು ಬಂಧಿಸಿದ ಪೊಲೀಸರು
ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ..?
* ಪಿಎಂ ಕಿಸಾನ್ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
* ಮುಖಪುಟದ ಬಲಭಾಗದಲ್ಲಿರುವ ರೈತರ ಕಾರ್ನರ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
* ಫಲಾನುಭವಿ ಸ್ಥಿತಿಯ ಮೇಲೆ ಕ್ಲಿಕ್ ಮಾಡಿ.
* ಹೊಸ ಪುಟವನ್ನು ತೆರೆಯಲು ನೋಂದಣಿ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆ ಆಯ್ಕೆಯನ್ನು ಆಯ್ಕೆಮಾಡಿ.
* ಕ್ಯಾಪ್ಚಾ ಕೋಡ್ ನಮೂದಿಸಿ.
* Generate OTP ಮೇಲೆ ಕ್ಲಿಕ್ ಮಾಡಿ.
* ಇದರ ನಂತರ ನಿಮ್ಮ ಸ್ಥಿತಿ ತಿಳಿಯುತ್ತದೆ.
* ನೀವು eKYC ಮಾಡಿಲ್ಲದಿದ್ದರೆ, ಸಿಸ್ಟಮ್ ನಿಮಗೆ ಯಾವುದೇ ಸ್ಥಿತಿಯ ಮಾಹಿತಿಯನ್ನ ನೀಡುವುದಿಲ್ಲ ಮತ್ತು ನಿಮ್ಮ KYC ಅನ್ನು ನವೀಕರಿಸಲು ನಿಮ್ಮನ್ನು ಕೇಳಬಹುದು.