ಬೆಂಗಳೂರು : ರಾಜ್ಯಾದ್ಯಂತ ಆಸ್ತಿ ನೋಂದಣಿ ಪ್ರಕ್ರಿಯೆಯಲ್ಲಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕಾಗಿ ರೂಪಿಸಿರುವ ಕಾವೇರಿ-2 ತಂತ್ರಾಂಶವನ್ನು ನವೆಂಬರ್ 1 ರಂದು ಲೋಕಾರ್ಪಣೆ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
BIGG NEWS : ವಸತಿ ರಹಿತ ಬಡಜನತೆಗೆ ಗುಡ್ ನ್ಯೂಸ್ : ಅಪಾರ್ಟ್ ಮೆಂಟ್ ಖರೀದಿಗೆ 5 ಲಕ್ಷ ರೂ. ನೆರವು!
ಆಸ್ತಿ ನೋಂದಣಿಗಾಗಿ ಜನ ನೋಂದಣಾಧಿಕಾರಿಗಳ ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಕಾವೇರಿ -2 ತಂತ್ರಾಂಶವನ್ನು ರೂಪಿಸಲಾಗಿತ್ತು. ಚಿಂಚೋಳಿಯಲ್ಲಿ ಪ್ರಾಯೋಗಿಕವಾಗಿ ಇದನ್ನು ಜಾರಿಮಾಡಲಾಗಿತ್ತು. ಅಲ್ಲಿ ಯಶಸ್ವಿಯಾದ ಕಾರಣ ರಾಜ್ಯಾದ್ಯಂತ ವಿಸ್ತರಣೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
BIG NEWS : ಕಾಕ್ಪಿಟ್ನಲ್ಲಿ ‘ಶಿಳ್ಳೆ’ ಸದ್ದು: ಮುಂಬೈಗೆ ಹೊರಟಿದ್ದ ವಿಸ್ತಾರಾ ವಿಮಾನ ದೆಹಲಿಗೆ ವಾಪಸ್
ಕಾವೇರಿ-2 ತಂತ್ರಾಂಶದಲ್ಲಿ ಮನೆಯಲ್ಲಿಯೇ ಕುಳಿತು ನೋಂದಣಿ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಬಹದು. ಅರ್ಜಿ ಜೊತೆಗೆ ದಾಖಲೆ ಸಲ್ಲಿಸಿದರೆ ಉಪನೋಂದಣಾಧಿಕಾರಿಗಳು ಅವುಗಳನ್ನು ಪರಿಶೀಲಿಸಲಿದ್ದಾರೆ.ಅದರಲ್ಲಿ ಏನಾದರೂ ಕೊರತೆ, ಅರ್ಜಿಯಲ್ಲಿ ತಪ್ಪಿದ್ದರೆ ಅರ್ಜಿದಾರರಿಗೆ ಮಾಹಿತಿ ಮತ್ತು ಸಮಯಾವಕಾಶ ನೀಡುತ್ತಾರೆ. ಸರಿಪಡಿಸಿದ ನಂತರ ನೋಂದಣಿಯಾಗುತ್ತದೆ ಎಂದು ತಿಳಿಸಿದ್ದಾರೆ.