ಸಿವಾನ್ : ಬಿಹಾರದ ಸಿವಾನ್ʼನಿಂದ ಆಘಾತಕಾರಿ ವೀಡಿಯೊವೊಂದು ಬೆಳಕಿಗೆ ಬಂದಿದ್ದು, ಅದ್ರಲ್ಲಿ ಶಿಕ್ಷಕನೊರ್ವನಿಂದ ಗ್ರಾಮಸ್ಥರು ಬಸ್ಕಿ ಹೊಡೆಸುತ್ತಿದ್ದಾರೆ. ಇಷ್ಟಕ್ಕೂ ಆ ಶಿಕ್ಷೆ ಕೊಡಬೇಕಾದ ಶಿಕ್ಷಕನಿಗೆ ಶಿಕ್ಷೆ ಕೊಡಿರೋದ್ಯಾಕೆ ಗೊತ್ತಾ?
ಶಿಕ್ಷಕ ಬಸ್ಕಿ ಹೊಡೆಯುತ್ತಿರುವ ವಿಡಿಯೋ ಸಧ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಇಷ್ಟಕ್ಕೂ ವಿಷ್ಯ ಏನೆಂದ್ರೆ, ಈ ಶಿಕ್ಷಕ ಟ್ಯೂಶನ್ ಹೇಳಿಕೊಡ್ತಿದ್ದು, ಅದ್ರಲ್ಲಿ ವಿದ್ಯಾರ್ಥಿನಿ ಒಬ್ಬಳಿಗೆ ಪ್ರಪೋಸ್ ಮಾಡಿದ್ದಾನೆ. ಆದ್ರೆ, ಆ ಹುಡುಗಿ ಆತನ ನಿವೇದನೆಯನ್ನ ತಿರಸ್ಕರಿಸಿದ್ದಾಳೆ. ಇದನ್ನ ಸಹಿಸದ ಆರೋಪಿ ಶಿಕ್ಷಕಿ, ಬಾಲಕಿಯನ್ನ ಚುಡಾಯಿಸುತ್ತಿದ್ದು, ಆಕೆಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದಾರೆ. ನಂತ್ರ ಶಿಕ್ಷಕನ ಕಾಟ ತಾಳದೇ ಹುಡುಗಿ ತನ್ನ ಕುಟುಂಬಕ್ಕೆ ವಿಷ್ಯ ಮುಟ್ಟಿಸಿದ್ದಾಳೆ. ನಂತ್ರ ಸಿಟ್ಟಿಗೆದ್ದ ಕುಟುಂಬಸ್ಥರು, ಪೋಲಿ ಶಿಕ್ಷಕನನ್ನ ತಳಿಸಿ, ಬಸ್ಕಿ ಹೊಡೆಯುವ ಶಿಕ್ಷೆ ನೀಡಿದ್ದಾರೆ. ಸಧ್ಯ ಈ ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
Viral Video : Teacher ने छात्रा को किया प्रपोज फिर जो हुआ देखकर दंग रह जाएंगे आप| Bihar Tak#viral #teacher pic.twitter.com/aWrgkf3cHb
— Bihar Tak (@BiharTakChannel) September 4, 2022