ನವದೆಹಲಿ : ಕ್ರಿಕೆಟಿಗ ಅರ್ಷ್ದೀಪ್ ಸಿಂಗ್ ಭಾರತ-ಪಾಕಿಸ್ತಾನ ಪಂದ್ಯದ ನಂತ್ರ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿಯಲ್ಲಿದ್ದಾರೆ. ಅವ್ರ ವಿರುದ್ಧದ ಪಿತೂರಿಯನ್ನ ಈಗ ಭೇದಿಸಲಾಗಿದೆ. ಮೂಲಗಳ ಪ್ರಕಾರ, ಕ್ರಿಕೆಟಿಗ ಅರ್ಷ್ದೀಪ್ ಸಿಂಗ್ ಬಗ್ಗೆ ಪಾಕಿಸ್ತಾನದ ಪಿತೂರಿ ಬಹಿರಂಗವಾಗಿದೆ. ಅರ್ಷ್ದೀಪ್ ಅವ್ರನ್ನ ಖಲಿಸ್ತಾನಿ ಎಂದು ಬ್ರಾಂಡ್ ಮಾಡಲು ಪಾಕಿಸ್ತಾನದ ಐಎಸ್ಪಿಆರ್ ಪಿತೂರಿ ನಡೆಸಿದೆ ಎಂದು ತಿಳಿದುಬಂದಿದೆ.
ಪಂಜಾಬಿನ ಸಿಖ್ ಜನರನ್ನ ಭಾರತದ ವಿರುದ್ಧ ಪ್ರಚೋದಿಸಲು ಇಂತಹ ಪಿತೂರಿಯನ್ನ ರೂಪಿಸಲಾಯಿತು ಎನ್ನಲಾಗ್ತಿದ್ದು, ಇದಕ್ಕಾಗಿ ಪಾಕಿಸ್ತಾನದ ನೂರಾರು ಟ್ವಿಟರ್ ಹ್ಯಾಂಡಲ್ಗಳು ಖಲಿಸ್ತಾನಿ ಟ್ವೀಟ್ ಮಾಡಿವೆ.
ಅರ್ಷದೀಪ್ ಸಿಂಗ್ ಏಕೆ ಗುರಿಯಾಗಿದ್ದಾರೆ?
ಭಾನುವಾರ ಏಷ್ಯಾಕಪ್ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ಪಂದ್ಯವಿತ್ತು. ಈ ಸೂಪರ್ ಫೋರ್ ಪಂದ್ಯದಲ್ಲಿ ಪಾಕಿಸ್ತಾನ ಐದು ವಿಕೆಟ್ಗಳಿಂದ ಭಾರತವನ್ನ ಸೋಲಿಸಿತು. ಈ ಪಂದ್ಯದಲ್ಲಿ ರವಿ ಬಿಷ್ಣೋಯ್ ಎಸೆತದಲ್ಲಿ ಆಸಿಫ್ ಅಲಿ ಹಿಡಿದ ಅತ್ಯಂತ ಸುಲಭವಾದ ಕ್ಯಾಚ್ʼನ್ನ ಅರ್ಷದೀಪ್ ಸಿಂಗ್ ಕೈಬಿಟ್ಟರು. ಇದು ಸುಮಾರು 18ನೇ ಓವರ್. ಆಗ ಪಾಕಿಸ್ತಾನಕ್ಕೆ 12 ಎಸೆತಗಳಲ್ಲಿ 26 ರನ್ಗಳ ಅಗತ್ಯವಿತ್ತು. ಇದಾದ ಬಳಿಕ ಟೀಂ ಇಂಡಿಯಾ ಸೋಲಿಗೆ ಟ್ವಿಟ್ಟರ್ನಲ್ಲಿ ಅರ್ಷದೀಪ್ ಸಿಂಗ್ರನ್ನ ಗುರಿಯಾಗಿಸಿಕೊಂಡು ಟೀಕಿಸಲಾಗ್ತಿದೆ. ಇನ್ನು ಅವರ ವಿಕಿಪೀಡಿಯಾ ಪುಟದಲ್ಲಿ ಬದಲಾವಣೆಗಳನ್ನ ಸಹ ಮಾಡಲಾಗಿದೆ.