ಬೆಂಗಳೂರು: ನಗರದಲ್ಲಿ ಸುರಿದ ಮಳೆಗೆ ಬಹುತೇಕ ಪ್ರದೇಶಗಳು ಮುಳುಗಡೆಯಾಗಿದೆ. ಮಳೆಯಿಂದ ಮಾನ್ಯತಾ ಟೆಕ್ ಪಾರ್ಕ್ ಕೂಡ ಜಲಾವೃತಗೊಂಡಿದೆ. ಈ ಹಿನ್ನೆಲೆ ಕೆಲವು ನೌಕರರು ತಮ್ಮ ಕಚೇರಿಗೆ ತಲುಪಲಾಗದೇ ಮನೆಗೆ ಮರಳಬೇಕಾಯಿತು.
ಮಾನ್ಯತಾ ಟಡಕ್ ಪಾರ್ಕ್ ಹಿಂಭಾಗದ ರಾಮಯ್ಯ ಲೇಔಟ್ ರಾಜಕಾಲುವೆ ನೀರಿನಿಂದ ತುಂಬಿ ಹರಿಯುತ್ತಿದೆ. ಎಲಿಮೆಂಟ್ಸ್ ಮಾಲ್ ಮುಂಭಾಗದ ರಸ್ತೆ ನದಿಯಂತೆ ಮಾರ್ಪಾಡುಗೊಂಡಿದ್ದು, ರಸ್ತೆಯಲ್ಲಿ ಹಲವರು ವಾಹನಗಳು ಕೆಟ್ಟು ನಿಂತಿದೆ. ಹಾಗಾಗಿ ಎರಡು ಭಾಗದ ರಸ್ತೆಗಳನ್ನು ಕೂಡ ಬ್ಲಾಕ್ ಮಾಡಲಾಗಿದೆ.
ಮಾನ್ಯತಾ ಪಕ್ಕದ ರಾಮಯ್ಯ ನಾರ್ತ್ ಸಿಟಿ ಲೇಔಟ್ ಮಳೆ ನೀರಿನಿಂದ ಸಂಪೂರ್ಣ ಮುಳುಗಡೆಯಾಗಿದ್ದು, ಪ್ರತಿಷ್ಟಿತ ಬಡಾವಣೆಗೆ ನೀರು ನುಗ್ಗಿದೆ.
When whole Bangalore is playing how can #Manyata not in match..#BengaluruRains pic.twitter.com/1sYjea2pKh
— Pruthvin Reddy (@Pruthvinreddy) September 5, 2022