ಚಿತ್ರದುರ್ಗ: ಪೋಕ್ಸೋ ಕೇಸ್ನಲ್ಲಿ ಮುರುಘಾಶ್ರೀಗಳ ಬಂಧನ ಪ್ರಕರಣ ಸಂಬಂಧ ಮುರುಘಾಶ್ರೀಗಳ ಪೊಲೀಸ್ ಕಸ್ಟಡಿ ಇಂದಿಗೆ ಮುಕ್ತಾಯವಾಗಲಿದ್ದು, ಕೋರ್ಟ್ ನಲ್ಲಿ ಶ್ರೀಗಳು ವಿಚಾರಣೆ ಆಗಿದೆ. ಇದೀಗ ಮತ್ತೆ ನ್ಯಾಯಾಂಗ ಬಂಧನ ವಿಧಿಸಿ ಚಿತ್ರದುರ್ಗದ 2 ನೇ ಹೆಚ್ಚುವರಿ ನ್ಯಾಯಾಲಯ ಆದೇಶ ನೀಡಿದೆ.
BIGG NEWS: ಸಿಲಿಕಾನ್ ಸಿಟಿಯಲ್ಲಿ ವರುಣ ಅಬ್ಬರಕ್ಕೆ ರಸ್ತೆಗಳು ಮುಳುಗಡೆ; ಐಟಿ-ಬಿಟಿ ಕಂಪನಿಗಳಿಗೆ ರಜೆ ಘೋಷಣೆ
ಒಂಬತ್ತು ದಿನಗಳ ಕಾಲ ಶ್ರೀಗಳು ಬಂಧನವಾಗಿದೆ. ಸೆ. ೧೪ ರಂದು ಮುರುಘಾಮಠದ ಶ್ರೀಗಳಿಗೆ ನ್ಯಾಯಾಂಗ ಬಂಧನವಾಗಿದೆ. ಸದ್ಯ ಶ್ರೀಗಳಿಗೆ ಜೈಲೇ ನಲ್ಲಿ ಇರಬೇಕಿದೆ. ಶ್ರೀಗಳನ್ನು ಪೊಲೀಸರು ಜೈಲಿಗೆ ಕರೆದುಕೊಂಡು ಹೋಗುತ್ತಿದ್ದಾರೆ.
ಇನ್ನು ಮುರುಘಾ ಶ್ರೀಗಳನ್ನು ಭಾನುವಾರ ಅಧಿಕಾರಿಗಳು ಮುರುಘಾ ಮಠಕ್ಕೆ ಕರೆದೊಯ್ದು ಸ್ಥಳ ಮಹಜರು ನಡೆಸಿದ್ದಾರೆ. ಬೆಳಗ್ಗೆ 11.45 ರಿಂದ ಮಧ್ಯಾಹ್ನ 2.30 ರವರೆಗೆ ಮಠದಲ್ಲಿ ಮಹಜರು ನಡೆಯಿತು. ಮಠದಿಂದ ಮಹಜರು ಮುಗಿಸಿಕೊಂಡ ಹೋದ ಶ್ರಿಗಳು ಡಿವೈಎಸ್ ಪಿ ಕಚೇರಿಯಲ್ಲಿ ಕೆಲಕಾಲ ವಿಶ್ರಾಂತಿ ಪಡೆದಿದ್ದಾರೆ. ನಂತರ ಮತ್ತೆ ವಿಚಾರಣೆಗೆ ಹಾಜರಾಗಿದ್ದಾರೆ.