ಬೆಂಗಳೂರು: ನಗರದಲ್ಲಿ ರಾತ್ರಿ ಸುರಿದ ವರುಣ ಅಬ್ಬರಕ್ಕೆ ಬೆಂಗಳೂರು ಜನರು ತತ್ತರಿಸಿ ಹೋಗಿದ್ದಾರೆ. ಸರ್ಜಾಪುರ, ಮಾರತ್ತಹಳ್ಳಿ ಭಾಗದಲ್ಲಿ ರಸ್ತೆಗಳು ಮುಳುಗಡೆಯಾಗಿದೆ.ಈ ಹಿನ್ನೆಲೆಯಲ್ಲಿ ಐಟಿ-ಬಿಟಿ ಕಂಪನಿಗಳಿಗೆ ರಜೆ ಘೋಷಣೆ ಮಾಡಲಾಗಿದೆ.
BIGG NEWS: ರಾಜ್ಯಾದ್ಯಂತ ಇಂದು ಗುಡುಗು ಸಹಿತ ಭಾರೀ ಮಳೆ : 18 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ
ರಸ್ತೆಗಳು ಜಲಾವೃತ, ಟ್ರಾಫಿಕ್ ಜಾಮ್ನಿಂದಾಗಿ ಸರ್ಜಾಪುರ, ಮಾರತಹಳ್ಳಿ ಭಾಗದ ಭಾಗಶಃ ಐಟಿ ಬಿಟಿ ಕಂಪನಿಗಳಿಗೆ ರಜೆ ಘೋಷಣೆ ಮಾಡಲಾಗಿದೆ, ಮಳೆ ಹೆಚ್ಚಾಗಿದ್ದ ಕಾರಣ ಬೆಂಗಳೂರು-ತುಮಕೂರು ಸರ್ವಿಸ್ ರಸ್ತೆ ಜಲಾವೃತವಾಗಿದ್ದು, ಸರ್ವಿಸ್ ರಸ್ತೆ ಜಲಾವೃತಗೊಂಡ ಪರಿಣಾಮ ಟ್ರಾಫಿಕ್ಜಾಮ್ ಉಂಟಾಗಿದೆ. ಇದರಿಂದಾಗಿ ವಾಹನ ಸವಾರರು ಪರದಾಡುವಂತೆ ಆಗಿದೆ.