ಬೆಂಗಳೂರು : ಬೆಂಗಳೂರಿನಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದ್ದು, ಭಾನುವಾರ ರಾತ್ರಿಯಿಂದ ಸುರಿಯುತ್ತಿರುವ ಮಳೆಯಿಂದಾಗಿ ಅವಾರಂತರ ಸೃಷ್ಟಿಯಾಗಿದೆ.
ʻಶಿಕ್ಷಣ, ಸಾಮಾಜಿಕ ಅರಿವಿನಿಂದಾಗಿ ಭಾರತದ ಜನಸಂಖ್ಯೆಯು ಕುಸಿಯುತ್ತಿದೆʼ: ವಿದೇಶಾಂಗ ಸಚಿವ ಎಸ್ ಜೈಶಂಕರ್
ನಗರದ ವಿವಿಧೆಡೆ ದಾಖಲೆಯ ಮಳೆಯಾಗಿದ್ದು, ಬೆಳ್ಳಂದೂರಿನ ಎಕೋಸ್ಪೇಸ್ ಬಳಿ ಮತ್ತೆ ನೀರು ತುಂಬಿಕೊಂಡಿದೆ. ನಗರದ ವಿವಿಧೆಡೆ ರಸ್ತೆ, ಅಂಡರ್ ಪಾಸ್ ಹಾಗೂ ಮೇಲ್ಸೇತುವೆಗಳ ಮೇಲೆ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ತಾವರೆಕೆರ ಚೋಳನಾಯನಹಳ್ಳಿಯಲ್ಲಿ ಹೆಚ್ಚು ಮಳೆ ದಾಖಲಾಗಿದೆ. ಚೋಳನಾಯಕನಹಳ್ಳಿಯಲ್ಲಿ 15.5 ಮಿ.ಮೀ ಮಳೆ ದಾಖಲಾಗಿದೆ. ಸೊಂಡೆಕೊಪ್ಪ 79.5 ಮಿ.ಮೀ,ಹುಸ್ಕೂರು 70 ಮಿ.ಮೀ, ದಾಸಾನಪುರದಲ್ಲಿ 65.5 ಮಿ.ಮೀ ಮಳೆಯಾಗಿದೆ. ಬೆಂಗಳೂರಿನಲ್ಲಿ ಮುಂದಿನ 3 ಗಂಟೆ ಭಾರೀ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
BREAKING NEWS : ದಾವಣಗೆರೆಯಲ್ಲಿ ತುಂಗಾಭದ್ರ ನದಿಯಲ್ಲಿ ಸ್ನಾನಕ್ಕೆ ಹೋಗಿದ್ದ ಇಬ್ಬರು ಸಹೋದರಿಯರು ನೀರುಪಾಲು
ರಾಜ್ಯದ 18 ಜಿಲ್ಲೆಗಳಲ್ಲಿ ಇಂದು ಭಾರೀ ಮಳಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು, ಕೊಪ್ಪಳ, ರಾಯಚೂರು, ಬಳ್ಳಾರಿ, ದಾವಣಗೆರೆ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ಮೈಸೂರು, ಕೋಲಾರ, ಮಂಡ್ಯ, ರಾಮನಗರ,ಶಿವಮೊಗ್ಗ, ತುಮಕೂರು, ಸೇರಿ 18 ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ.