ಕೆಎನ್ ಎನ್ ನ್ಯೂಸ್ ಡೆಸ್ಕ್ : ಸಾಮವ್ಯವಾಗಿ ಎಲ್ಲರು ಕೇಳಿರುತ್ತೇವೆ ರಾತ್ರಿ ಬೇಗ ಮಲಗಿ, ಬೆಳಗ್ಗೆ ಬೇಗ ಏಳುಬೇಕು ಅಂತಾ. ಸೂರ್ಯ ಉದಯ ಆಗೋದೊರಳಗೆ ಎದ್ದೇಳಬೇಕು ಎಂದು ಹಿರಿಯರು ಹೇಳುತ್ತಾರೆ. ಆದರೆ ಅದನ್ನ ತುಂಬಾ ಜನ ಪಾಲಿಸುವುದಿಲ್ಲ.
BIGG BREAKING NEWS : ಮುರುಘಾ ಶ್ರೀಗಳ ವಿರುದ್ಧ ಪೋಕ್ಸೊ ಪ್ರಕರಣ : 3ನೇ ಆರೋಪಿ ಮಠದ ಮರಿಸ್ವಾಮಿ ಪೊಲೀಸರ ವಶಕ್ಕೆ
ಈಗೂ ಎಷ್ಟೋ ಮಂದಿ ರಾತ್ರಿ ಲೇಟ್ ಆಗಿ ಮಲಗಿ ಬೆಳಗ್ಗೆ ಲೇಟ್ ಎದ್ದೇಳುತ್ತಾರೆ. ಇಂದಿನ ಜೀವನ ಶೈಲಿನಿಂದ ಜೀವನವೇ ಬದಲಾಗಿ ಹೋಗಿದೆ. ಆದ್ರೆ ಇವತ್ತು ಏಕೋ ಕಣ್ಣು ಎಳೆಯುತ್ತಿದೆ. ನಾಳೆಯಿಂದ ಬೇಗ ಎದ್ರಾಯ್ತು ಎಂದುಕೊಳ್ಳೋರೇ ಹೆಚ್ಚು.
ಬೆಳಗ್ಗೆ ಬೇಗ ಎದ್ದೇಳುವುದನ್ನು ಸಮರ್ಥಿಸಲು, ನಿರಾಕರಿಸಲು ಸಾಕಷ್ಟು ಕಾರಣಗಳು ಇರಬಹುದು. ಬೆಳಗ್ಗೆ ಬೇಗ ಎದ್ದೇಳುವುದರಿಂದ ಏನೆಲ್ಲ ಪ್ರಯೋಜನಗಳಿವೆ ಎನ್ನುವುದನ್ನು ನೋಡೋಣ.
* ಹೆಚ್ಚು ಸಮಯ ಸಿಗುತ್ತದೆ
ಪ್ರತಿದಿನ ಸಮಯ ಕಳೆದದ್ದೇ ಗೊತ್ತಾಗುವುದಿಲ್ಲ ಎನ್ನುವವರು ನೀವಾಗಿದ್ದರೆ ಬೆಳಗ್ಗೆ 5 ಅಥವಾ 6ಕ್ಕೆ ಎದ್ದು ನೋಡಿ. ಒಂದು ದಿನದಲ್ಲಿ ಎಷ್ಟೊಂದು ಸಮಯವಿದೆ ಎನಿಸುತ್ತದೆ.
BIGG BREAKING NEWS : ಮುರುಘಾ ಶ್ರೀಗಳ ವಿರುದ್ಧ ಪೋಕ್ಸೊ ಪ್ರಕರಣ : 3ನೇ ಆರೋಪಿ ಮಠದ ಮರಿಸ್ವಾಮಿ ಪೊಲೀಸರ ವಶಕ್ಕೆ
*. ವ್ಯಾಯಾಮ ಮಾಡಿ
ತಡವಾಗಿ ಎದ್ದರೆ ವ್ಯಾಯಾಮ ಬಿಡಿ, ಹಲ್ಲುಜುವುದೇ ಕಷ್ಟ ಎನ್ನುವ ಗಡಿಬಿಡಿ ಬಹುತೇಕರಿಗೆ ಇರುತ್ತದೆ. ಸರಿಯಾಗಿ ತಿಂಡಿ ಮಾಡದೆ ಆಫೀಸ್ಗೆ “ಲೇಟಾಯ್ತುʼʼ ಎಂದು ಓಡುತ್ತಾರೆ. ಆದರೆ, ಬೆಳಗ್ಗೆ ಬೇಗ ಎದ್ದು ನೋಡಿ. ಏನಾದರೂ ಚಟುವಟಿಕೆಯಲ್ಲಿ ನಿರತರಾಗಬೇಕೆನಿಸುತ್ತದೆ. ವ್ಯಾಯಾಮ ಮಾಡಬೇಕೆನಿಸುತ್ತದೆ. ಪ್ರತಿನಿತ್ಯ ವ್ಯಾಯಾಮ ಮಾಡುವವರಿಗೆ ಹೆಚ್ಚು ಸಮಯ ದೊರಕುತ್ತದೆ. ಮನೆ ಹತ್ತಿರದ ಪಾರ್ಕಿಗೂ ವಾಕ್ ಹೋಗಬಹುದು.
* ಹೆಚ್ಚುವರಿ ಕೆಲಸಕ್ಕೆ ಅನುಕೂಲ
ಪ್ರತಿನಿತ್ಯ ಏನಾದರೂ ಮಾಡಬೇಕಿತ್ತು, ಮಾಡಲು ಟೈಮಿಲ್ಲ ಎಂದು ಆಲೋಚಿಸುವವರಿಗೆ “ಮಾಡಲಾಗದೆ ಉಳಿದ ಕೆಲಸಗಳನ್ನುʼʼ ಮಾಡಲು ಬೆಳಗ್ಗಿನ ಸಮಯ ದೊರಕುತ್ತದೆ. ಇದರೊಂದಿಗೆ, ಪ್ರತಿನಿತ್ಯ ಮಾಡುವ ಕೆಲಸಗಳನ್ನು ಮಾಡಲು ಕೊಂಚ ಹೆಚ್ಚುವರಿ ಸಮಯವೂ ದೊರಕುತ್ತದೆ.