ಬ್ರಿಟನ್ : ಭಾರತೀಯ ಮೂಲದ ರಿಷಿ ಸುನಕ್ ಮತ್ತು ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಇವರಲ್ಲಿ ಯಾರು ಬ್ರಿಟನ್ ಪ್ರಧಾನಿ ಪಟ್ಟಕ್ಕೇರಲಿದ್ದಾರೆ ಎಂದು ಇಂದು ನಿರ್ಧಾರವಾಗಲಿದೆ.
ಪ್ರಧಾನಿ ಪಟ್ಟಕ್ಕೆ ಅಂತಿಮವಾಗಿ ಕಣದಲ್ಲಿರುವ ಇವರು ಭಾನುವಾರ ತಮ್ಮದೇ ಆದ ಪ್ರತಿಜ್ಞೆಯನ್ನು ನೀಡಿದ್ದಾರೆ. ರಿಷಿ ಸುನಕ್ ಕಡಿಮೆ ಆದಾಯದ ಜನರನ್ನು ಗುರಿಯಾಗಿಸಿಕೊಂಡು ಪ್ರಚಾರ ಮಾಡಿದರೆ, ಇತ್ತ ಲಿಜ್ ಟ್ರಸ್ ನಾನು ಪ್ರಾಧಾನಿಯಾಗಿ ಆಯ್ಕೆಯಾದರೆ, “ತಕ್ಷಣವೇ ಕ್ರಮ ಕೈಗೊಂಡು ಕಾರ್ಯನಿರ್ವಹಿಸುತ್ತೇನೆ” ಎಂದಿದ್ದಾರೆ. ಆದ್ರೆ, ಯಾವ ವಿಷಯದ ಬಗ್ಗೆ ಟ್ರಸ್ ಕ್ರಮ ಕೈಗೊಳ್ಳುತ್ತೇನೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ.
ಇದುವರೆಗೂ ನಡೆದ ಎಲ್ಲಾ ಸಮೀಕ್ಷೆಗಳಲ್ಲೂ ಲಿಜ್ ಟ್ರಸ್ ಅವರೇ ಪ್ರಧಾನಿ ರೇಸ್ನಲ್ಲಿ ಮುಂದಿದ್ದಾರೆ. ಲಿಜ್ ಟ್ರಸ್ ಆಯ್ಕೆಯಾದರೆ, ಮಾರ್ಗರೇಟ್ ಥ್ಯಾಚರ್ ಮತ್ತು ಥೆರೆಸಾ ಮೇ ಅವರ ಬಳಿಕ ಪ್ರಧಾನಿ ಪಟ್ಟಕ್ಕೇರಿದ 3ನೇ ಮಹಿಳೆಯಾಗಲಿದ್ದಾರೆ. ಇನ್ನೂ, ಇದೇ ಮೊದಲ ಬಾರಿಗೆ ಭಾರತೀಯ ಮೂಲದ ರಾಜಕಾರಣಿ(ರಿಷಿ ಸುನಕ್)ಯೊಬ್ಬರು ಬ್ರಿಟಿಷ್ ಪ್ರಧಾನಿ ಪಟ್ಟಕ್ಕೆ ಸ್ಪರ್ಧಿಸಿದ್ದಾರೆ.
ಬ್ರಿಟನ್ ಪ್ರಧಾನಿ ಆಯ್ಕೆಗೆ ಶುಕ್ರವಾರ ಸಂಜೆ ಮತ ಚಲಾವಣೆ ಮುಕ್ತಾಯಗೊಂಡಿತು. ಇಂದು ಮತ ಎಣಿಕೆ ನಡೆಯಲಿದ್ದು, ಮುಂದಿನ ಪ್ರಧಾನಿ ಯಾರಾಗಲಿದ್ದಾರೆ ಎಂದು ತಿಳಿಯಲಿದೆ. ಸ್ಥಳೀಯ ಕಾಲಮಾನ ಮಧ್ಯಾಹ್ನ 12.30ರ ವೇಳೆಗೆ ಚುನಾವಣಾಧಿಕಾರಿ ಸರ್ ಗ್ರಹಾಂ ಬ್ರಾಡಿ ಫಲಿತಾಂಶ ಪ್ರಕಟಿಸಲಿದ್ದಾರೆ ಎಂದು ಕನ್ಸರ್ವೇಟಿವ್ ಕ್ಯಾಂಪೇನ್ ಹೆಡ್ಕ್ವಾರ್ಟರ್ಸ್ (ಸಿಸಿಎಚ್ಕ್ಯೂ) ತಿಳಿಸಿದೆ.
BIGG BREAKING NEWS : ಮುರುಘಾ ಶ್ರೀಗಳ ವಿರುದ್ಧ ಪೋಕ್ಸೊ ಪ್ರಕರಣ : 3ನೇ ಆರೋಪಿ ಮಠದ ಮರಿಸ್ವಾಮಿ ಪೊಲೀಸರ ವಶಕ್ಕೆ