ಮಂಗಳೂರು : ಕಳೆದ 11 ವರ್ಷಗಳಿಂದ ಸ್ಪೋಟಕ ಪತ್ತೆ ಕಾರ್ಯ ನಿರ್ವಹಿಸುತ್ತಿದ್ದ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಶ್ವಾನ ʻಗೀತಾʼ ಶನಿವಾರ ಸಾವನ್ನಪ್ಪಿತ್ತು. ಇದೀಗ ಅದರ ಅಂತ್ಯಕ್ರಿಯೆಯನ್ನು ಸಕಲ ಗೌರವಗಳೊಂದಿಗೆ ಪೊಲೀಸರು ನೆರವೇರಿಸಿದರು.
ಲ್ಯಾಬ್ರಡಾರ್ ರಿಟ್ರೀವರ್ ತಳಿಯ ಈ ಹೆಣ್ಣು ಶ್ವಾನ ಮೇ 21, 2011 ರಂದು ಜನಿಸಿತ್ತು. ಆಗಸ್ಟ್ 19, 2011 ರಂದು ಪೊಲೀಸ್ ಪಡೆಗೆ ಸೇರ್ಪಡೆಯಾಗಿತ್ತು. ಕರ್ತವ್ಯಕ್ಕೆ ಸೇರಿ 11 ವರ್ಷಗಳ ಕಾಲ ಇಲಾಖೆಗೆ ಸೇವೆ ಸಲ್ಲಿಸಿತ್ತು.
Karnataka | The last rites of the 11-year-old police dog Geetha were held with full honours in Mangaluru today
Geetha was deployed extensively in the security and explosive detection work during the arrival of VVIPs and other huge public gatherings. It passed away on Sept 3. pic.twitter.com/1VOWf5pxaY
— ANI (@ANI) September 4, 2022
ಗೀತಾ ಬೆಂಗಳೂರಿನ ಸಿಎಆರ್ ಸೌತ್ ನಲ್ಲಿ 11 ತಿಂಗಳ ಕಾಲ ತರಬೇತಿ ಪಡೆದಿತ್ತು. ಹರೀಶ್ ಎಂಬ ಪೊಲೀಸ್ ಸಿಬ್ಬಂದಿ ಶ್ವಾನದ ಹ್ಯಾಂಡ್ಲರ್ ಆಗಿದ್ದರು. ಮಂಗಳೂರಿಗೆ ವಿವಿಐಪಿ ಭೇಟಿ ನೀಡಿದಾಗ ಬಂದೋಬಸ್ತ್ ತಂಡದ ಭಾಗವಾಗಿದ್ದ ಗೀತಾ ಇಲಾಖೆಯಲ್ಲಿ 11 ವರ್ಷಗಳ ಸೇವಾವಧಿಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು.
JOBS ALEART: ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ಇಲಾಖೆಯಲ್ಲಿ 229 ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಮಾಹಿತಿ
SC/ST ಸಮುದಾಯಕ್ಕೆ ರಾಜ್ಯ ಸರ್ಕಾರದಿಂದ ‘ಬಿಗ್ ಶಾಕ್’: ‘ಉಚಿತ ವಿದ್ಯುತ್ ಯೋಜನೆ’ ಆದೇಶ ವಾಪಸ್ಸು
ನ್ಯಾಯಾಂಗ ನಿಂದನೆ: ವಿಜಯ್ ಮಲ್ಯ ಬಗ್ಗೆ ಇಂದು ಮಹತ್ವದ ತೀರ್ಪು ಪ್ರಕಟಿಸಲಿರುವ ಸುಪ್ರಿಂಕೋರ್ಟ್ | Vijay Mallya